ಅಬು ಧಾಬಿ: ನಮ್ಮ ದೇಶದಲ್ಲಿ ಸೆಲೆಬ್ರಿಟಿಗಳು ಬ್ರೇಕ್ ಅಪ್ ಆಗಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡುತ್ತಾರೆ, ಮದುವೆಯ ಫೋಟೋಗಳನ್ನು ಅಳಿಸುತ್ತಾರೆ. ಆದರೆ ದುಬೈ ರಾಜಕುಮಾರಿ ಪತಿಗೆ ವಿಚ್ಛದನವನ್ನು ಇನ್ಸ್ಟಾದಲ್ಲಿ ಕೊಟ್ಟು ದುಬೈ ಶೇಕ್ಗಳ ರೇಂಜ್ ಯಾವ ಮಟ್ಟದ್ದೆಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ..ಈ ವಿಷಯ ವೈರಲ್ ಆಗುತ್ತಿದೆ.
ಇದನ್ನೂ ಓದಿ: ವಿದ್ಯುತ್ ಬಗ್ಗೆ ಎಚ್ಚರ.. ಮೈಮರೆತ ವ್ಯಕ್ತಿ ಕ್ಷಣಾರ್ಧದಲ್ಲಿ ಭಸ್ಮ!
ದುಬೈನ ರಾಜ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ ಶೇಖ್ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತನ್ನ ಪತಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನ ಅಲ್ ಮಕ್ತೌಮ್ ರಿಂದ ವಿಚ್ಛೇದನವನ್ನು ಸಾರ್ವಜನಿಕವಾಗಿ ಘೋಷಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ, ‘ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ, ಹುಷಾರಾಗಿರು.. ನಿಮ್ಮ ಮಾಜಿ ಪತ್ನಿ’ ಎಂಬ ಎಚ್ಚರಿಕೆಯೊಂದಿಗೆ ವಿಚ್ಛೇದನವನ್ನು ಘೋಷಿಸಿದರು.
ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ ಕೇವಲ ಎರಡು ತಿಂಗಳ ನಂತರ ದಂಪತಿ ಬೇರ್ಪಟ್ಟಿರುವುದು ಬಿಸಿಬಿಸಿ ಚರ್ಚೆಗೆ ಗ್ರಾಸವನ್ನು ಒದಗಿಸಿದೆ.
‘ಆತ್ಮೀಯ ಪತಿಯೇ.. ನೀನು ಬೇರೆಯವರೊಂದಿಗೆ ಅನ್ಯೋನ್ಯವಾಗಿರುವುದರಿಂದ.. ನಾನು ವಿಚ್ಛೇದನವನ್ನು ಘೋಷಿಸುತ್ತಿದ್ದೇನೆ. ನಾನು ವಿಚ್ಛೇದನ ಪಡೆಯುತ್ತಿದ್ದೇನೆ.. ಟೇಕ್ ಕೇರ್.. ನನ್ನ ಮಾಜಿ ಪತಿ’ ಎಂದು ಶೇಖ್ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಟ್ವೀಟ್ ಮಾಡಿದ್ದಾರೆ.
ಈ ದಂಪತಿಗಳು ಇನ್ಸ್ಟಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದರು. ಅವರ ಪ್ರೊಫೈಲ್‌ಗಳಿಂದ ಪರಸ್ಪರರ ಎಲ್ಲಾ ಫೋಟೋಗಳನ್ನು ಅಳಿಸಿದ್ದರು. ಇದು ಅವರ ನಡುವೆ ಏನೋ ನಡೆಯುತ್ತಿದೆ ಎಂಬ ಚರ್ಚೆಗೆ ಕಾರಣವಾಗಿತ್ತು.