ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಮೆಹೆಂದಳೆ ಬಾಜಿನ

20-RNR-07
Published on

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣದ ಚಿತ್ರಕಲಾ ಶಿಕ್ಷಕ ಡಾ. ಜಿ.ಜೆ. ಮೆಹೆಂದಳೆ ಅವರಿಗೆ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.
ದೇಶದ 350ಕ್ಕೂ ಅಧಿಕ ಅಪರಿಚಿತ ಕ್ರಾಂತಿಕಾರಿ ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರಗಳನ್ನು ಖಾದಿ ಬಟ್ಟೆ ಮೇಲೆ ಬರೆದು ನಾಡಿನುದ್ದಕ್ಕೂ 1219 ಕಡೆ ಮತ್ತು ಸಿಂಗಪುರ, ಮಲೇಶಿಯಾ ದೇಶದಲ್ಲಿ ಪ್ರದರ್ಶನ ಮಾಡಿದ್ದಕ್ಕಾಗಿ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net