ಪಾನಿಪುರಿ, ಮಸಾಲೆಪುರಿಯಲ್ಲೂ ಬಣ್ಣ; ಕೃತಕ ಬಣ್ಣಗಳ ಬಳಕೆ ತಿನಿಸುಗಳ ನಿಷೇಧಕ್ಕೆ ಕಾರಣ...

Panipuri
Published on

ಬೆಂಗಳೂರು: ಪಾನಿಪುರಿ, ಮಸಾಲೆಪುರಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಮಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಪಾನಿಪುರಿಯ ಮೇಲೆ ಒಂದು ರೀತಿಯ ವ್ಯಾಮೋಹ ಇದೆ. ಆದರೆ ನಾವು ನಾಲಿಗೆ ಚಪ್ಪರಿಸಿ ತಿನ್ನುವ ಈ ಆಹಾರದಲ್ಲಿ  ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕೆಮಿಕಲ್​ ಬಳಕೆ ಮಾಡಲಾಗುತ್ತದೆ.

ಪಾನಿಪುರಿ ದಕ್ಷಿಣ ಏಶಿಯಾದ ಒಂದು ಜನಪ್ರಿಯ ಹಾಗು ರುಚಿಕರವಾದ ಖಾದ್ಯ. ಭಾರತದಲ್ಲಿ ಪ್ರತಿಯೊಂದು ಊರಲ್ಲೂ ಪಾನಿ ಪೂರಿ ಗಾಡಿಗಳು ಕಾಣಸಿಗುತ್ತವೆ. ಗೋಳಾಕಾರವಾಗಿರುವ ಪೂರಿಯಲ್ಲಿ ಈರುಳ್ಳಿ,  ಬೇಯಿಸಿದ ಬಟಾಣಿ, ಆಲೂಗಡ್ಡೆ ಇವುಗಳನ್ನು ಒಂದೊಂದಾಗಿ ತುಂಬಿ, ಮೊದಲೇ ತಯಾರಿಸಿದ ಪಾನಿ ಹಾಗು ಸ್ವೀಟ್ ಜೊತೆ ತಿನ್ನಲು ರುಚಿಯಾಗಿರುತ್ತದೆ. ಬಹುತೇಕರು ಪಾನಿಪುರಿ ತಿನ್ನೋದರಿಂದ ಯಾವುದೇ ಆರೋಗ್ಯಕರ ಲಾಭಗಳಿಲ್ಲ ಎಂದು ಹೇಳುತ್ತಾರೆ. ಪಾನಿಪುರಿ ಕೇವಲ ಬಾಯಿ ರುಚಿಗೆ ಮಾತ್ರ ಎಂದು ಹಲವರು ಹೇಳುತ್ತಿರುತ್ತಾರೆ.

ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕೆಮಿಕಲ್​ ಇದೆ ಎನ್ನುವ ಕಾರಣಕ್ಕಾಗಿ ಈಗಾಗಲೇ ಹೊರರಾಜ್ಯಗಳಲ್ಲಿ ಬ್ಯಾನ್​​ ಮಾಡಲಾಗಿದೆ. ಕಲಬೆರಕೆ ಕಲರ್ ಬಳಕೆ ಮಾಡೋದು ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಆಹಾರ ಮತ್ತು ಸುರಕ್ಷತಾ ಇಲಾಖೆ ಹೋಟೆಲ್, ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬಳಿ ಕಾಂಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಮಾಡಿದೆ. ಈ ಟೆಸ್ಟ್ ನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆಯಾಗಿದೆ.

ಕಾಟನ್ ಕ್ಯಾಂಡಿಯಲ್ಲಿ ರಂಡೋಮನ್ ಬಿ ಅಂಶ ಇರೋದು ಪತ್ತೆಯಾಗಿದೆ. ಜೊತೆಗೆ ಗೋಬಿ ಮಂಚೂರಿಗೆ ಹಾಕುವ ಕಲರ್ ಜಲ್ಲಿಗಳನ್ನ ಟೌನ್ ಟೆಸ್ಟ್ ಗೆ ಒಳಪಡಿಸಿದಾಗ ಅದರಲ್ಲೂ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲೂ ಬ್ಯಾನ್ ಮಾಡುವ ಸಾಧ್ಯತೆ ಇದೆ.

ಆದರೆ ಈಗ ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಮಂಚೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆಯಾಗಿದೆ. ಈ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ನಾಳೆ  ಹೊರಬೀಳುವ ಸಾಧ್ಯತೆ ಇದೆ.  ಈ  ಸುದ್ದಿ ಬೆನ್ನಲ್ಲೆ ಕೆಲವರು ಕಬಾಬ್​, ಪಾನಿಪೂರಿ ಹಾಗೂ ಮಸಾಲೆಪುರಿನೂ ಕೂಡಾ ಬ್ಯಾನ್​ ಮಾಡಿ. ಇಲ್ಲೂ ಟೇಸ್ಟ್​ ಹಾಗೂ ಬಣ್ಣಕ್ಕೆ ಕೆಮಿಕಲ್​ ಬಳಕೆ ಮಾಡಿ ಎನ್ನುವ ಮಾತು ಕೇಳಿ ಬರುತ್ತಿದೆ.

ಕೃತಕ ಬಣ್ಣಗಳ ಬಳಕೆ ಮಾಡುತ್ತಿರುವುದೆ ತಿನಿಸುಗಳ ನಿಷೇಧಕ್ಕೆ ಕಾರಣವಾಗಿದೆ. ಪಾನಿಪುರಿ, ಮಸಾಲೆ ಪುರಿಯಲ್ಲೂ ಬಣ್ಣ

ಪದಾರ್ಥಗಳಿಗೆ ಮಿಶ್ರಣ ಮಾಡುವ ಬಣ್ಣದಲ್ಲಿ ಹಾನಿಕಾರ ಅಂಶವಿರುವುದು ಬೆಳಕಿಗೆ. ಗ್ರಾಹಕರನ್ನು ಸೆಳೆಯಲು ಅಥವಾ ರುಚಿ ನೀಡಲು ಬಣ್ಣಗಳ ಬಳಕೆ ಮಾಡಲಾಗುತ್ತಿದೆ. ಆದರೆ ಇವುಗಳ ಸೇವನೆಯಿಂದ ಅನಾರೋಗ್ಯಕ್ಕೆ ಒಳಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಕೃತಕ ಬಣ್ಣ ಬಳಸುವ ಆಹಾರ ಪದಾರ್ಥಗಳು?: ಪಲಾವ್‌, ಗ್ರೀನ್‌ಪೀಸ್‌ ಮಸಾಲ, ಮಸಾಲಪುರಿ, ಪಾನಿಪುರಿಯಲ್ಲಿ ಬಳಸುವ ಹಸಿರು ಬಟಾಣಿಯಲ್ಲಿ ಮಾಲಚೈಟ್‌ ಗ್ರೀನ್‌ ಮಿಶ್ರಣ. ಈ ಬಟಾಣಿ ಕಾಳುಗಳನ್ನು ನೀರಿನಲ್ಲಿ ಹಾಕಿದಾಕ್ಷಣ ಹಸಿರು ಬಣ್ಣ ಬಿಡುತ್ತವೆ. ಬಾಳೆಕಾಯಿ ಮತ್ತು ಮಾವಿನಕಾಯಿ ಬೇಗ ಹಣ್ಣಾಗಲು, ಬಣ್ಣ ಕೆಡದಂತೆ ಇರಲು ಮತ್ತು ಹೆಚ್ಚುದಿನ ಕೆಡದಂತಡೆ ಇಡಲು ಸಹ ರಾಸಾಯನಿಕ ಬಳಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net