ಹಿರಿಯರ ಹಾದಿ: ಸರಳತೆ, ಪ್ರಾಮಾಣಿಕತೆಯೇ ಉಸಿರಾಗಿದ್ದ ಧ್ಯೇಯಜೀವಿ

guljarilal
Published on

ಹಲವು ದಶಕಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯ ಒಂದು ವಸತಿ ಪ್ರದೇಶದಲ್ಲಿ ನಡೆದಿದ್ದ ಘಟನೆಯಿದು. ಬಾಡಿಗೆ ಕೊಡಲಿಲ್ಲ ಎಂದು ಮನೆಮಾಲೀಕನೊಬ್ಬ 94 ವರ್ಷದ ವೃದ್ಧನನ್ನು ಮನೆಯಿಂದ ಹೊರಗೆ ಹಾಕಿ ಸಾಮಾನುಗಳನ್ನು ಎಸೆದಿದ್ದ. ಸಾಮಾನುಗಳೆಂದರೆ ಒಂದು ಹಳೆಯ ಹಾಸಿಗೆ, ಕೆಲವು ಅಲ್ಯುಮಿನಿಯಂ ಪಾತ್ರೆಗಳು, ಒಂದು ಪ್ಲಾಸ್ಟಿಕ್​ ಬಕೆಟ್​ ಮತ್ತು ಮಗ್​, ಇಷ್ಟೇ. "ಬಾಡಿಗೆ ಕಟ್ಟಲು ಸ್ವಲ್ಪ ಕಾಲಾವಕಾಶ ನೀಡಿ...' ಎಂದು ಮುದಿಜೀವ ಎಷ್ಟು ಬೇಡಿಕೊಂಡರೂ ಮಾಲೀಕನಿಗೆ ಕರುಣೆ ಬರಲಿಲ್ಲ. ನೆರೆಮನೆಯವರು ಕೂಡ ಆ ವೃದ್ಧನ ಬಗ್ಗೆ ಕನಿಕರ ತೋರಿ ಸ್ವಲ್ಪ ಸಮಯಾವಕಾಶ ನೀಡುವಂತೆ ಮಾಡಿದ ಮನವಿ ಫಲ ಕೊಟ್ಟಿತು. ಕೊನೆಗೊಮ್ಮೆ ಮನೆಮಾಲೀಕ ಒಲ್ಲದ ಮನಸ್ಸಿನಿಂದ ಅದಕ್ಕೆ ಅವಕಾಶ ನೀಡಿದ. ವೃದ್ಧ ತನ್ನ ಸಾಮಾನುಗಳನ್ನು ಒಳಗೆ ತೆಗೆದುಕೊಡು ಹೋದರು.

ಅಲ್ಲೇ ಹಾದು ಹೋಗುತ್ತಿದ್ದ ಒಬ್ಬ ಪತ್ರಕರ್ತ ಈ ಇಡೀ ಬೆಳವಣಿಗೆಗಳನ್ನು ನೋಡಿದ. ಪ್ರಕಟಿಸಲು ಇದೊಂದು ಒಳ್ಳೆಯ ಸುದ್ದಿ ಆಗಬಹುದು ಎಂದು ಯೋಚಿಸಿದ ಆತ, ಬಾಡಿಗೆದಾರ ಹಾಗೂ ಮನೆಯ ಕೆಲವು ೋಟೋಗಳನ್ನು ಕ್ಲಿಕ್ಕಿಸಿಕೊಂಡ. ಕಚೇರಿಗೆ ತೆರಳಿ ಪತ್ರಿಕೆಯ ಮಾಲೀಕನಿಗೆ ಆತ ಎಲ್ಲವನ್ನೂ ವಿವರಿಸಿದ. ವರದಿಗಾರ ಕೊಟ್ಟ ಚಿತ್ರಗಳನ್ನು ಕಂಡ ಮಾಲೀಕ ಒಂದು ಕ್ಷಣ ಆವಾಕ್ಕಾದ. "ಆ ವೃದ್ಧ ಯಾರೆಂದು ನಿನಗೆ ಗೊತ್ತೇ?' ಎಂದು ಪ್ರಶ್ನಿಸಿದ. "ಇಲ್ಲ' ಎನ್ನುವುದು ಉತ್ತರವಾಗಿತ್ತು.

ಮರುದಿನ ಪತ್ರಿಕೆಯ ಮುಖಪುಟದಲ್ಲಿ ದೊಡ್ಡದಾಗಿ ಸುದ್ದಿ ಪ್ರಕಟವಾಯಿತು. "ದಯನೀಯ ಬದುಕು ನಡೆಸುತ್ತಿರುವ ಮಾಜಿ ಪ್ರಧಾನಿ ಗುಲ್ಜಾರಿಲಾಲ್​ ನಂದಾ' ವರದಿಯ ಶೀಷಿರ್ಕೆಯಾಗಿತ್ತು. ನಂದಾ ಬಾಡಿಗೆ ಕಟ್ಟಲಾಗದ ಪರಿಸ್ಥಿತಿ, ಅವರನ್ನು ಮಾಲೀಕ ಮನೆಯಿಂದ ಹೊರಹಾಕಿದ್ದು ಮೊದಲಾದವನ್ನು ಅದರಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಇಂದಿನ ದಿನಮಾನದಲ್ಲಿ ಕೆಲಸಕ್ಕೆ ಹೊಸದಾಗಿ ಸೇರಿದವರು ಕೂಡ ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ. ಆದರೆ, ಮಾಜಿ ಪ್ರಧಾನಿ ಹಾಗೂ ಸುದೀರ್ ಕಾಲ ಕೇಂದ್ರ ಸಚಿವರಾಗಿದ್ದವರು ಒಂದು ಸ್ವಂತ ಮನೆಯನ್ನೂ ಹೊಂದಿಲ್ಲ ಎಂದೂ ವರದಿಯಲ್ಲಿ ಟಿಪ್ಪಣಿ ಮಾಡಲಾಗಿತ್ತು. ವಾಸ್ತವವಾಗಿ, ನಂದಾರಿಗೆ 500 ರೂಪಾಯಿ ಮಾಸಿಕ ಭತ್ಯೆ ಮಂಜೂರಾಗಿತ್ತು. ಆದರೆ ಅದನ್ನು ಪಡೆಯಲು ಅವರು ನಿರಾಕರಿಸಿದ್ದರು. "ನಾನು ಸ್ವಾತಂತ್ರ್ಯ ಹೋರಾಟಗಾರನ ಮಾಸಾಶನಕ್ಕಾಗಿ ಹೋರಾಡಿರಲಿಲ್ಲ' ಎಂಬುದು ಅವರ ನಿಲುವಾಗಿತ್ತು. ಬೇರೆ ಯಾವುದೇ ಆದಾಯ ಮೂಲ ಇಲ್ಲದಿರುವುದರಿಂದ ಅದನ್ನು ಒಪ್ಪಿಕೊಳ್ಳುವಂತೆ ಗೆಳೆಯರು ಮನವರಿಕೆ ಮಾಡಿದ್ದರಿಂದ ಅದನ್ನು ಸ್ವೀಕರಿಸಲು ಕೊನೆಗೂ ಒಪ್ಪಿದ್ದರು. ಅದನ್ನೇ ಮನೆಬಾಡಿಗೆ ಕಟ್ಟಲು ಬಳಸುತ್ತಿದ್ದರು.

ವರದಿ ಪ್ರಕಟವಾದ ಮರುದಿನವೇ ಆಗಿನ ಪ್ರಧಾನಮಂತ್ರಿ, ನಂದಾ ಮನೆಗೆ ಸಚಿವರು ಹಾಗೂ ಅಧಿಕಾರಿಗಳನ್ನು ಕಳಿಸಿಕೊಟ್ಟರು. ಸಾಲುಸಾಲು ವಾಹನ ಹಾಗೂ ವಿಐಪಿಗಳನ್ನು ಕಂಡು ಮನೆಮಾಲೀಕರಿಗೆ ಅಚ್ಚರಿಯೋ ಅಚ್ಚರಿ. ತಮ್ಮ ಮನೆಯಲ್ಲಿ ಇದುವರೆಗೆ ಬಾಡಿಗೆಗಿದ್ದ ನಂದಾ ಅವರು ದೇಶದ ಮಾಜಿ ಪ್ರಧಾನಿ ಎಂಬುದು ಅವರಿಗೆ ಗೊತ್ತಾಗಿದ್ದು ಆಗಲೇ. ತಕ್ಷಣವೇ ಮನೆಮಾಲೀಕ ಗುಲ್ಜಾರಿಲಾಲ್​ ನಂದಾರ ಕಾಲಿಗೆ ಬಿದ್ದು ತನ್ನ ದುರ್ವತನೆಗಾಗಿ ಕ್ಷಮೆಕೋರಿದರು. ಸರ್ಕಾರಿ ಮನೆ ಹಾಗೂ ಇತರ ಸೌಲಭ್ಯ ಪಡೆಯುವಂತೆ ಸಚಿವರು, ಅಧಿಕಾರಿಗಳು ಕೋರಿದರೂ ಅದಕ್ಕೆ ನಂದಾ ಒಪ್ಪಲಿಲ್ಲ. ಈ ವೃದ್ಧಾಪ್ಯದಲ್ಲಿ ಇವೆಲ್ಲ ಯಾಕೆ ಎಂಬುದು ಅವರ ಪ್ರಶ್ನೆಯಾಗಿತ್ತು.

ತಮ್ಮ ಜೀವದ ಕೊನೆಯುಸಿರು ಇರುವವರೆಗೂ ನಂದಾ ನೈಜ ಗಾಂಧಿವಾದಿಯಾಗಿ ಬಾಳಿದರು. 1997ರಲ್ಲಿ ಅವರಿಗೆ "ಭಾರತರತ್ನ' ಪ್ರದಾನಿಸಿ ಗೌರವಿಸಲಾಯಿತು.

ಭಾರತದಂಥ ವಿಶಾಲ ದೇಶದ ಪ್ರಧಾನಿಯಾಗಿದ್ದರೂ ನಂದಾ ಅವರು ತೀರಾ ಸರಳ ಜೀವನ ನಡೆಸಿ ಬಾಡಿಗೆ ಕೊಡಲೂ ಹಣವಿಲ್ಲದೆ ನಡೆಸಿದ ಪರದಾಟವನ್ನು ಇಂದಿನ ರಾಜಕಾರಣಿಗಳೊಂದಿಗೆ ಹೋಲಿಸಲೂ ಆಗುವುದಿಲ್ಲ. ಅಬ್ಬಾ! ಒಬ್ಬ ಪಂಚಾಯಿತಿ ಸದಸ್ಯ ಕೂಡ ಹೊಂದಿರುವ ಆಸ್ತಿಪಾಸ್ತಿ, ಐಶ್ವರ್ಯ ಕಂಡರೆ ಸಾಕು, ಅವರ ವೈಭವವನ್ನು ಊಹಿಸಿಕೊಳ್ಳಬಹುದು. 1898 ಜುಲೈ 4ರಂದು ಈಗಿನ ಪಾಕಿಸ್ತಾನದಲ್ಲಿರುವ ಸಿಯಾಲ್​ಕೋಟ್​ನಲ್ಲಿ ಜನಿಸಿದ ನಂದಾ, 1998 ಜನವರಿ 15ರಂದು ನಿಧನರಾದರು. ಸರಳತೆಯೇ ಮೂತಿರ್ವೆತ್ತಂತಿದ್ದ ನಂದಾ ಪ್ರಾಮಾಣಿಕತೆ, ಸತ್ಯಸಂಧತೆಗೆ ಪರ್ಯಾಯವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net