ಇಂದಿನ ರಂಗಭೂಮಿ ಚಟುವಟಿಕೆಯಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ. ಪ್ರಯೋಗಗಳಲ್ಲಿ ಹೊಸತನ, ಸ್ತ್ರೀಸಂವೇದನೆ, ತಂತ್ರಜ್ಞಾನ, ಪಾಶ್ಚಾತ್ಯ ಸಂಸ್ಕೃತಿ ಎಲ್ಲವೂ ಯುವಪೀಳಿಗೆಯನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ, ಆಡಳಿತ, ಆರಕ್ಷಕ ವ್ಯವಸ್ಥೆ, ಮಹಿಳೆ, ಪರಿಸರ ಹೀಗೆ ಎಲ್ಲವೂ ರಂಗಭೂಮಿಯ ವಿಷಯಗಳಾಗಿ ಹೊಸ ಹೊಸ ಪ್ರಯೋಗಗಳು ತೆರೆಗೆ ಬರಲಿವೆ. ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಯೋಜನೆಗಳನ್ನು ಮಾಡಿಕೊಳ್ಳಬೇಕಿದೆ. ರಂಗಕರ್ವಿುಗಳಿಗೆ ವೇತನ ಕಡಿಮೆ, ಖರ್ಚು ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ರಂಗ ಚಟುವಟಿಕೆಗಳ ಜತೆಗೆ ಹೇಗೆ ಸಂದರ್ಭಗಳನ್ನು ಎದುರಿಸಬೇಕು ಎಂಬುದನ್ನು ಕರೊನಾ ಕಲಿಸಿದೆ. ಲಾಕ್ಡೌನ್ ಆದಾಗ ದೇವರಿಗೇ ಡಿಜಿಟಲ್ ಆರತಿ, ವರ್ಚುವಲ್ ದರ್ಶನ ಪ್ರಾರಂಭವಾಯಿತು. ಅದೇ ರೀತಿ ರಂಗಭೂಮಿಗೂ ಈಗ ಡಿಜಿಟಲ್ ಟಚ್ ದೊರೆತಿದೆ. ಸರ್ಕಾರದ ಯೋಜನೆಗಳೆಲ್ಲ ಕೇವಲ ಆಶ್ವಾಸನೆಗಳಾಗಿಯೇ ಉಳಿಯುತ್ತಿವೆ. ಹಾಗಾಗಿ ರಂಗಕರ್ವಿುಗಳು ತಮ್ಮ ಮುಂದಿನ ದಿನಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಾವೇ ಕಲಿಯಬೇಕಿದೆ. ಸಂದರ್ಭಗಳು ಎಲ್ಲವನ್ನೂ ಕಲಿಸುತ್ತವೆ.