

| ಮೋಹನ ಗೌಡ
ಪರಸ್ಪರ ನಿರಪೇಕ್ಷ ಪ್ರೀತಿ, ಕಾಳಜಿ, ಜವಾಬ್ದಾರಿ ಹಾಗೂ ಸಹೋದರ - ಸಹೋದರಿಯ ಉತ್ತಮ ಸಂಬಂಧವನ್ನು ನಿರ್ಮಾಣ ಮಾಡುವ ಹಬ್ಬ ರಕ್ಷಾ ಬಂಧನ. ಸನಾತನ ಧರ್ಮದಲ್ಲಿ ರಕ್ಷಾಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2023 ರಲ್ಲಿ ರಕ್ಷಾಬಂಧನವನ್ನು ಇಂದು (ಆ. 30) ಆಚರಿಸಲಾಗುತ್ತಿದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿ ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆ ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ನಮ್ಮ ಪುರಾಣದಲ್ಲಿ ಇರುವ ಕೆಲ ಮಾಹಿತಿ ಹೀಗಿದೆ:
2. ಮಕರ ಸಂಕ್ರಾಂತಿಯಂದು ಕೃಷ್ಣನು ಕಬ್ಬು ಅರೆಯುವಾಗ ಆತನ ಕಿರುಬೆರಳು ಕತ್ತರಿಸಿಹೋಗುತ್ತದೆ. ಅವನ ರಾಣಿ ರುಕ್ಮಿಣಿ ತಕ್ಷಣವೇ ಗಾಯಕ್ಕೆ ಸುತ್ತಲು ಬಟ್ಟೆ ತರುವಂತೆ ಸಹಾಯಕಳನ್ನು ಕಳುಹಿಸಿದಳು. ಅಷ್ಟರಲ್ಲಿ ಇಡೀ ಘಟನೆಯನ್ನು ನೋಡುತ್ತಿದ್ದ ದ್ರೌಪದಿ ತನ್ನ ಸೀರೆಯನ್ನು ಸ್ವಲ್ಪ ಹರಿದು ತನ್ನ ಬೆರಳಿನಿಂದ ರಕ್ತವನ್ನು ನಿಲ್ಲಿಸಿದಳು. ಪ್ರತಿಯಾಗಿ, ಅಗತ್ಯವಿದ್ದಾಗ ಕೃಷ್ಣ ಅವಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದನು. ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ಬಂದು ಅವಳ ರಕ್ಷಣೆ ಮಾಡಿದನು.
3. ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಪಾತಾಳದಿಂದ ಮುಕ್ತಗೊಳಿ ಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.
ಹಬ್ಬದ ಉದ್ದೇಶ: ಇಂದು ಎಲ್ಲ ಕಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನಡೆಯುತ್ತಿರುವ ಈ ಸಂದರ್ಭದಲ್ಲಿ ರಕ್ಷಾಬಂಧನವು ಯುವಕ-ಯುವತಿಯರಿಗೆ ಇದರಿಂದ ಹೊರಬರಲು ಇರುವ ಒಂದು ವ್ರತವಿದ್ದಂತೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ, ಯಾರಾದರೊಬ್ಬ ಯುವಕನು ಯಾರಾದರೊಬ್ಬ ತರುಣಿಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ಇದರಿಂದ ಯುವತಿಯ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.
ಸಹೋದರ-ಸಹೋದರಿಯ ಈ ಪವಿತ್ರ ಬಂಧನವು ಯುವ ಜನರನ್ನು ಲೈಂಗಿಕ ವಿಕಾರಗಳ ಕೂಪದಲ್ಲಿ ಬೀಳುವುದರಿಂದ ತಪ್ಪಿಸಲು ಸಮರ್ಥವಾಗಿದೆ. ಈ ನಿರ್ಮಲ ಪ್ರೇಮದ ಮುಂದೆ ಕಾಮ-ಕ್ರೋಧವು ಶಾಂತವಾಗುತ್ತದೆ. ಹೀಗೆ ರಕ್ಷಾಬಂಧನ ಹಬ್ಬವು ಸಮಾಜವನ್ನು ಒಗ್ಗೂಡಿಸುವ ಒಂದು ಸಂಧಿಯಾಗಿದೆ.
(ಆಧಾರ : ಸನಾತನ ನಿರ್ವಿುತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)
( ಲೇಖಕರು ಹಿಂದೂ ಜನಜಾಗೃತಿ ಸಮಿತಿ ವಕ್ತಾರರು)