ಕಿರಾಣಿ ಅಂಗಡಿ, ಬೇಕರಿಗಳಲ್ಲಿ 500 ರೂ.ಖೋಟಾ ನೋಟು ಕೊಟ್ಟವನನ್ನು ಬಂಧಿಸಿದ ಪೊಲೀಸರು

Khota note 7 Jan 20
Published on

ಹಾವೇರಿ: 500 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಸವಣೂರು ಪಟ್ಟಣದಲ್ಲಿ ನಡೆದಿದೆ.

ಸಂತೋಷ್​ ಗುಜ್ಜರ್​ (45) ಬಂಧಿತ. ಈತ ರಾಣೆಬೆನ್ನೂರು ನಿವಾಸಿಯಾಗಿದ್ದು ಬೇಕರಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಚಲಾಯಿಸಿದ್ದ. ಆದರೆ ಈ ನೋಟುಗಳ ಬಗ್ಗೆ ಕೆಲವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅದರ ಅನ್ವಯ ಸಂತೋಷ್​ ಗುಜ್ಜರ್​ ಬಳಿ ಪೊಲೀಸರು ವಿಚಾರಿಸಿದಾಗ ಆತ ಸೂಕ್ತ ಉತ್ತರ ನೀಡಲಿಲ್ಲ.

ಖೋಟಾ ನೋಟು ಎಂದು ಗೊತ್ತಿದ್ದರೂ ಅದನ್ನು ಚಲಾವಣೆ ಮಾಡಿದ ಆರೋಪದಡಿ ಸವಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net