

ಬೆಂಗಳೂರು: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯೊಂದಕ್ಕೆ ತೆರಳಿ ಮಹಿಳೆಗೆ ಮಾರಕಾಸ ತೋರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಳದ ರವಿಕುಮಾರ್, ವಿಜಯ್‌ಕುಮಾರ್ , ಚಿರಾಗ್‌ಗೌಡ ಬಂಧಿತರು. ಆರೋಪಿಗಳಿಂದ ೭೫ ಸಾವಿರ ರೂ. ಮೌಲ್ಯದ ೧೫ ಗ್ರಾಂ ತೂಕದ ಚಿನ್ನದ ಸರ, ಮೂರು ಮೊಬೈಲ್‌ಗಳು ಹಾಗೂ ಒಂದು ಡ್ರ್ಯಾಗರ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನೀರು ಕೇಳುವ ನೆಪದಲ್ಲಿ ತೆರಳಿದ್ದ ದುಷ್ಕರ್ಮಿಗಳು ಮಹಿಳೆಗೆ ಮಾರಕಾಸ್ತ್ರ ತೋರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.