ಗಾಂಜಾ ಮಾರಾಟ, ಸೇವನೆ ಮಾಡುತ್ತಿದ್ದವರ ಬಂಧನ

Published on

ಗೋಣಿಕೊಪ್ಪಲು : ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊನ್ನಂಪೇಟೆ ಪೊಲೀಸರು 4 ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ವಿರಾಜಪೇಟೆ ನಿವಾಸಿ ಕಲೀಲ್ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಯಾಗಿದ್ದು, ಈತನಿಂದ ಗಾಂಜಾ ಮಾರಾಟಕ್ಕೆ ಬಳಸಿದ್ದ ವ್ಯಾನ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಪೊನ್ನಂಪೇಟೆ ಕುಂದ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಪೊನ್ನಂಪೇಟೆ ಟಿ.ಆರ್.ರಸ್ತೆಯ ಪಿ.ಆರ್.ನವೀನ್, ಕಾವೇರಿ ನಗರದ ವಿ.ಬಿ.ಶ್ರೀಹರಿ ಹಾಗೂ ಕಾಟ್ರಕೊಲ್ಲಿಯ ಶರಣು ಎಂಬುವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ನಿರ್ದೇಶನದ ಮೇರೆಗೆ ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್‌ಸ್ಪೆಕ್ಟರ್ ಶಿವರಾಜ್ ಮುಧೋಳ್ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಸಿಬ್ಬಂದಿ ಎಸ್.ಬಿ.ಮಹದೇಶ್ವರ ಸ್ವಾಮಿ, ಮಂಜುನಾಥ್, ಬಸವರಾಜು, ಪ್ರಸನ್ನ, ದಯಾನಂದ ಕಂಬಳಿ, ಮುತ್ತುರಾಜು, ಹರೀಶ್, ಎಚ್.ಪಿ.ಪ್ರವೀಣ, ಸಂತೋಷ್ ದೊಡ್ಡಮನಿ, ಬಾಳಪ್ಪ ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net