ಹುಲಿ ಕೊಂದ ಕಿರಾತಕರ ಬಂಧನ.. ಹಂದಿ ಹಿಡಿಯಲು ಹೋದವರಿಗೆ ಹುಲಿ ಬಲೆಗೆ ಬಿದ್ದಿದ್ದೇಗೆ? | Tiger

tigar
Published on

ತಮಿಳುನಾಡು: ಇಲ್ಲಿನ ನೀಲಗಿರಿ ಜಿಲ್ಲೆಯ ಗೂಡಲೂರಿನಲ್ಲಿ ಮೂರು ವರ್ಷದ ಗಂಡು ಹುಲಿ(Tiger) ಸಾವಿಗೆ ಸಂಬಧಿಸಿದಂತೆ ಗುರುವಾರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಣಿಕಂದನ್​, ಮಾರಿಮುತ್ತು ಮತ್ತು ವೇದನ್​ ಎಂಬ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಗೂಡಲೂರಿನಲ್ಲಿ ಇತ್ತೀಚಿಗೆ ಮೂರು ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಹಂದಿಗಳನ್ನು ಹಿಡಿಯುಲ್ಲಿ ನಿಸ್ಸೀಮ ಹೊಂದಿದ್ದ ಈ ಮೂವರನ್ನು ಶಂಕಿಸಿ ವಿಚಾರಣೆ ನಡೆಸಿದಾಗ ಹುಲಿ ಮರಿಯನ್ನು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ..

ಈ ಮೂವರು ಎಂದಿನಂತೆ ಗೂಡಲೂರಿನ ಆರಣ್ಯ ಪ್ರದೇಶದಲ್ಲಿ ಕಾಡು ಹಂದಿ ಹಿಡಿಯಲು ಬಲೆ ಬಿಸಿದ್ದಾರೆ. ಅರಣ್ಯದ ವಿವಿಧ ಪ್ರದೇಶಗಳಲ್ಲಿ ಕ್ಲಚ್​ ತಂತಿಗಳಿಂದ ತಯಾರಿಸಿದ ಬಲೆಯ ಬೋನ್​ಗಳನ್ನು ಇಟ್ಟಿದ್ದಾರೆ. ಈ ಬೋನ್​ಗಳನ್ನು ಸಾಮಾನ್ಯವಾಗಿ ಹಂದಿಗಳನ್ನು ಹಿಡಿಯಲು ಬಳಸುತ್ತಾರೆ. ಆದರೆ, ಅಂದು ಹಂದಿಗಳ ಬದಲಾಗಿ ಮೂರು ವರ್ಷದ ಹುಲಿ ಮರಿ ಬೋನ್​ಗೆ(ಬಲೆ) ಬಿದ್ದಿದೆ. ತಂತಿ ಬಲೆ ಹುಲಿಯ ಕುತ್ತಿಯಲ್ಲಿ ಬಿಗಿಹಿಡಿತ ಕಾರಣ ಸ್ಥಳದಲ್ಲೇ ಮೃತಪಟ್ಟಿದೆ.ಇದರಿಂದ ಭಯಭೀತಿಕೊಂಡ ಈ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅರಣ್ಯಧಿಕಾರಿ ಗಸ್ತು ಸಂದರ್ಭದಲ್ಲಿ ಪ್ರಕರಣದ ಬೆಳಕಿಗೆ ಬಂದಿದೆ.

''ಮೀಸಲು ಆರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಮೂವರು ಆಕ್ರಮವಾಗಿ ಬಲೆಗಳನ್ನು ಹಾಕಿದ್ದಾರೆ. ಈ ಹಿನ್ನೆಲೆ ಹುಲಿ ಮೃತಪಟ್ಟಿದೆ. ಹುಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಇನ್ನು ಮುಂದೆ ಮೀಸಲು ಅರಣ್ಯದಲ್ಲಿ ಗಸ್ತು ಹೆಚ್ಚಿಸಲಾಗುತ್ತದೆ'' ಎಂದು ಅರಣ್ಯಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net