ಭಯೋತ್ಪಾದನೆಗೆ ಸಹಕರಿಸುತ್ತಿದ್ದ 10 ಮಂದಿ ಬಂಧನ.. ಅಪಾರ ಪ್ರಮಾಣದ ಎಲೆಕ್ಟ್ರಾನಿಕ್​ ಸಾಧನಗಳ ವಶ |Terrorism

terrorism-
Published on

ಜಮ್ಮು ಮತ್ತು ಕಾಶ್ಮೀರ: ಜಮ್ಮು ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ನ.27 ರಂದು ನಡೆಸಿದ ಭಾರೀ ಸೇನಾ ಕಾರ್ಯಚಾರಣೆಯಲ್ಲಿ ವಿವಿಧ ಭಯೋತ್ಪಾದಕ(Terrorism) ಗುಂಪುಗಳಿಗೆ ಸಹಾಯ ಮಾಡುತ್ತಿದ್ದ 10 ಓವರ್​ ಗ್ರೌಂಡ್​ ವರ್ಕರ್ಸ್​(OGWs) ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಕಥುವಾ ಜಿಲ್ಲೆಯ ಮಲ್ಹಾರ್, ಬಿಲ್ಲವರ್​​, ಕನಾ ಚೌಕ್​, ಹರಿಯಾ, ಸೋರಕ್​ ಪೇನ್​ ಮತ್ತು ವಾಜೀರ್​ ಸೇರಿದಂತೆ 17 ವಿವಿಧ ಪ್ರದೇಶಗಳಲ್ಲಿ ಸೇನಾ ಕಾರ್ಯಚಾರಣೆ ನಡೆಸಲಾಗಿದೆ.

ಇನ್ನು ಮಲ್ಹಾರ್,​ ಬಿಲ್ಲವರ್​ ಮತ್ತು ಬನಿ ಪ್ರದೇಶಗಳ ವ್ಯಾಪ್ತಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ನಡೆಯುವ ಕುರಿತು ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ನಿಟ್ಟಿನಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 10 ಮಂದಿ ಭಯೋತ್ಪಾದನ ಸಹಚರರನ್ನು ಬಂಧಿಸಲಾಗಿದೆ. ಅಲ್ಲದೆ, ಶೋಧದಲ್ಲಿ ವಿವಿಧ ಎಲೆಕ್ಟ್ರಾನಿಕ್​ ಸಾಧನಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ, ಜೈಶ್-ಎ-ಮುಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ಸಂಯೋಜಿತವಾದ ಮೂವರು ವಿದೇಶಿ ಭಯೋತ್ಪಾದಕನ್ನು ಕಥುವಾ ಜಿಲ್ಲೆಯ ಭದ್ರತಾ ಪಡೆಗಳಿಂದ ಎರಡು ವಿಭಿನ್ನ ಎನ್‌ಕೌಂಟರ್‌ಗಳಲ್ಲಿ ಮತ್ತು ಉಧಮ್‌ಪುರದ ಬಸಂತ್‌ಗಢದ ಅಂಚಿನಲ್ಲಿ ಶೂಟ್​ ಮಾಡಿ ಹೊಡೆದುರುಳಿಸಿದ್ದರು.

ಪೂಂಚ್ ರಜೌರಿ, ಉಧಂಪುರ್ ಮತ್ತು ರಿಯಾಸಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 56 ಕ್ಕೂ ಹೆಚ್ಚು ದಾಳಿಗಳನ್ನು ನಡೆಸುವ ಮೂಲಕ ಜೆಎಂ ಮತ್ತು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಗೆ ಸಂಬಂಧಿಸಿರುವ ಭಯೋತ್ಪಾದಕ ಜಾಲಗಳ ಮೇಲೆ ದಮನವನ್ನು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net