ಸರ ಕದಿದ್ದ ಆರೋಪಿಯ ಸೆರೆ

arrested
Published on

ಬೆಂಗಳೂರು: ಕ್ಯಾನ್‌ಗೆ ನೀರು ತುಂಬಿಸುತ್ತಿದ್ದ ಯುವಕನೊಬ್ಬನ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಇಬ್ಬರ ಪೈಕಿ ಒಬ್ಬ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಾಳಿಕಾನಗರದ ಅರವಿಂದ್ ಸ್ಕೂಲ್ ರಸ್ತೆಯ ಶ್ರೀಧರ(೨೧)ಬಂಧಿತ ಆರೋಪಿ. ಈತನ ಜತೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಾ.೧೯ ರಂದು ರಾತ್ರಿ ೧೦: ೩೦ರ ವೇಳೆ ಮಾರುತಿನಗರದ ಪ್ರತಾಪ್ ಅವರು ಚಕ್ರನಗರ ಮುಖ್ಯರಸ್ತೆಯ ವಾಲ್ಮೀಕಿ ನಗರದಲ್ಲಿರುವ ವಾಟರ್ ಪಾಯಿಂಟ್ ಬಳಿ ಹೋಗಿ ಕ್ಯಾನ್‌ಗೆ ನೀರು ತುಂಬಿಸುತ್ತಿರುವಾಗ ಬಂಧಿತ ಆರೋಪಿ ಸೇರಿ ಇಬ್ಬರು ಬೈಕ್‌ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ೧೩ ಗ್ರಾಂ ತೂಕದ ಚಿನ್ನದ ಚೈನ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಅಂದಾಜು ೮೦ ಸಾವಿರ ಬೆಲೆ ಬಾಳುವ ೧೩ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net