

ಬೆಂಗಳೂರು: ರಸ್ತೆಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದ ಆರ್ ಎಕ್ಸ್ ರವಿ ಆ್ಯಂಡ್ ಟೀಂ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಆರ್ ಎಕ್ಸ್ ರವಿ ಗ್ಯಾಂಗ್ ಸಂಚು ರೂಪಿಸಿತ್ತು. ಸೂಕ್ತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ರೌಡಿಗಳನ್ನು ಕಂಬಿ ಹಿಂದಕ್ಕೆ ತಳ್ಳಿದೆ.
ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಆರ್ ಎಕ್ಸ್ ರವಿ, ಶರತ್ ಬಾಬು, ದೀಪಕ್ ಕುಮಾರ್ ಸೇರಿ 6 ಜನರನ್ನು ಬಂಧಿಸಲಾಗಿದ್ದು, ಮೂರು ಲಾಂಗು, ಚಾಕು, ಕಾರದಪುಡಿ ಪೊಟ್ಟಣ, ಕೃತ್ಯಕ್ಕೆ ಬಳಸಿದ್ದ ಓಮಿನಿ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹಲವು ಕೇಸ್ಗಳು ಇವೆ.