ಕೊಲೆ ಆರೋಪಿಗಳ ಬಂಧನ

arrest-696x465-1.jpg
Published on

ಕೋಲಾರ: ತಾಲೂಕಿನ ನರಸಾಪುರದಲ್ಲಿ ಜುಲೈ 7ರಂದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪದಲ್ಲಿ ಮೂವರನ್ನು ವೇಮಗಲ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮಾಲೂರು ತಾಲೂಕಿನ ಮಂಗಾಪುರದ ಅಂಬರೀಶ್ (32), ಮಧುಕುಮಾರ್ (26) ಹಾಗೂ ಬೆಂಗಳೂರಿನ ಯಲಹಂಕದ ಮದನ್ (22) ಬಂಧಿತರು. ನಾರಾಯಣಸ್ವಾಮಿ ಕೊಲೆಯಾದವ.
ನರಸಾಪುರದ ಬೆಳ್ಳೂರು ಕೆರೆಯಲ್ಲಿ ಕುತ್ತಿಗೆಗೆ ಬಲವಾದ ಆಯುಧದಿಂದ ಚುಚ್ಚಿ ಕೊಲ್ಲಲ್ಪಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಶವ ಗುರುತಿಸಿದ ನರಸಾಪುರದ ಮಧು ಎಂಬಾತ ನೀಡಿದ ದೂರಿನ ಮೇರೆಗೆ ವೇಮಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದರು.
ಕೊಲೆಗೆ ಕಾರಣವೇನು?: ಕೊಲೆಯಾದ ನಾರಾಯಣಸ್ವಾಮಿ, ಎ1 ಆರೋಪಿ ಅಂಬರೀಶನೊಂದಿಗೆ ಟ್ರಾಕ್ಟರ್ ಮತ್ತು ಲಾರಿ ಚಾಲಕ ಮತ್ತು ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ನಾರಾಯಣಸ್ವಾಮಿ ತನ್ನ ಪತ್ನಿ ಜತೆ ಅಕ್ರಮ ಸಂಬAಧ ಹೊಂದಿದ್ದ ಎಂದು ಶಂಕಿಸಿದ್ದ ಅಂಬರೀಶ್, ಸ್ನೇಹಿತರ ಜತೆ ಸೇರಿ ಕೊಲೆಗೆ ಒಳಸಂಚು ರೂಪಿಸಿದ್ದ. ನಾರಾಯಣಸ್ವಾಮಿಗೆ ಮದ್ಯ ಕುಡಿಸಿ ಮಚ್ಚಿನಿಂದ ಕುತ್ತಿಗೆಗೆ ಬಲವಾಗಿ ಹೊಡೆದು ಮಾಲೂರು ಪಟ್ಟಣದಲ್ಲಿ ಕೊಲೆ ಮಾಡಿ ನರಸಾಪುರದ ಬೆಳ್ಳೂರು ಗ್ರಾಮದ ಕೆರೆಯಲ್ಲಿ ಬಿಸಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಎಸ್ಪಿ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ಅಽÃಕ್ಷಕರಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್.ನಾಗ್ತೆ ನೇತೃತ್ವದಲ್ಲಿ ವೇಮಗಲ್ ವೃತ್ತ ನಿರೀಕ್ಷಕ ಎಂ.ಜಿ.ಲೋಕೇಶ್, ಪಿಎಸ್‌ಐಗಳಾದ ಹೇಮಂತ್ ಕುಮಾರ್, ಅಣ್ಣಯ್ಯ, ಮತ್ತು ಸಿಬ್ಬಂದಿ ಎಎಸ್‌ಐ ನಾರಾಯಣಸ್ವಾಮಿ, ಪ್ರಕಾಶ್, ರವಿ, ನಟರಾಜು, ತಾಂತ್ರಿಕ ವಿಭಾಗದ ಸಿಬ್ಬಂದಿ ನಾಗರಾಜು, ಆಂಜಿನಪ್ಪ, ರಾಘವೇಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net