

ಕೋಲಾರ: ನಿವೇಶನದ ೯ ಇಂಚು ಜಾಗಕ್ಕಾಗಿ ಯುವಕನನ್ನು ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಸೆ.೨೩- ನಿವೇಶದ ೯ ಇಂಚು ಜಾಗಕ್ಕಾಗಿ ಉಂಟಾಗಿದ್ದ ವಿವಾದದಲ್ಲಿ ಸೋದರತ್ತೆಯ ಮಗನನ್ನು ನಗರದಲ್ಲಿ ಅಟ್ಟಾಡಿಸಿ ಕೊಂಡು ನಡುರಸ್ತೆಯಲ್ಲಿಯೇ ಮಾರಕಾಯುಧದಿಂದ ಬರ್ಬರವಾಗಿ ಹತ್ಯೆ ಮಾಡಿದ್ದ ದುಷ್ಕರ್ಮಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತ್ರತ್ವದಲ್ಲಿ ನಗರದ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ನಗರದ ಇದ್ರಿಷಾ ಮೊಹಲ್ಲಾದ ಮುಜಾಮಿಲ್ ಪಾಷ (೧೯) ಎಂಬ ಯುವಕನನ್ನು ಸೆ.೧೮ರಂದು ರೋಷನ್ ಜಮೀರ್ ಮತ್ತು ನಭಿಪಾಷ ಹತ್ಯೆ ಮಾಡಿ ತಲೆ ಮರಿಸಿಕೊಂಡಿದ್ದರು. ಸರ್ಕಾರಿ ನಿವೃತ್ತ ನೌಕರ ಯಾರಬ್ ಪಾಷ ನಿವೇಶನದಲ್ಲಿ ಮನೆ ನಿರ್ಮಿಸುತ್ತಿದ್ದರು, ಒಂದನೇ ಮಹಡಿ ಮೇಲ್ಛಾವಣಿ ೯ ಇಂಚು ಮುಂದೆಕ್ಕೆ ನಿರ್ಮಿಸುತ್ತಿರುವುದಕ್ಕೆ ಆತನ ತಂಗಿ ಫರ್ಹಾನಾ ಹಾಗೂ ಬಾಮೈದ ರೋಷನ್ ಜಮೀರ್ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಎರಡೂ ಕುಟುಂಬಗಳ ರಾಜೀಸಂದಾನ ನಡೆದಿದ್ದರು ವೈಷ್ಯಮ್ಯ ಭಗಿಲೆದ್ದಿತ್ತು.
ವಿರೋಧದಿಂದ ಯಾರಬ್ ಪಾಷ ಮನೆ ನಿರ್ಮಾಣವನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಿ, ಸೆ.೧೮ರಂದು ಕೆಲಸ ಪ್ರಾರಂಭಿಸಿದ್ದರು, ಇದನ್ನು ಕಂಡ ಫರ್ಹಾನಾ, ನಭೀಪಾಷ ಇಬ್ಬರು ಶಾಹಿ ದರ್ಗಾದ ಸಮೀಪದ ನಡೆದುಕೊಂಡು ಹೋಗುತ್ತಿದ್ದ ಮುಜಾಮಿಲ್ ಪಾಷನನ್ನು ಅಡ್ಡಗಟ್ಟಿ ಮಾರಕಸ್ತçಗಳಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತಪ್ಪಿಸಿಕೊಂಡ ಮುಜಾಮಿಲ್ ಪಾಷ ರಸ್ತೆ ಬದಿಯಲ್ಲಿದ್ದ ಕಾಂಡಿಮೆAಟ್ಸ್ನಲ್ಲಿ ಅವಿತುಕೊಂಡಿದ್ದ. ಅಲ್ಲಿಂದ ಎಳೆದು ಅಮಾನುಷವಾಗಿ ಡ್ರಾಗನ್‌ನಿಂದ ಹೊಟ್ಟೆಗೆ ತಿವಿದಾಗ ಮುಜಾಮಿಲ್ ಪಾಷ ಪ್ರಜ್ಞೆ ತಪ್ಪಿ ಬಿದ್ದ, ಕೂಡಲೇ ಸ್ಥಳೀಯರು ಮುಜಾಮಿಲ್ ಪಾಷ ಕುಟುಂಬಸ್ಥರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ರವಾನಿಸಿದರು. ಪ್ರಥಮ ಚಿಕಿತ್ಸೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಡಿಸಿ ಆರ್‌ಎಲ್ ಜಾಲಪ್ಪ ಆಸ್ಪತ್ರೆಗೆ ರವಾನಿವಾಸುವ ವೇಳೆ ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದಾರೆ. ಹಲ್ಲೆ ಕೊರರನ್ನು ಹಿಡಿಯಲು ಸ್ಥಳೀಯರು ಯತ್ನಿಸಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಆರೋಪಿಗಳ ಪತ್ತೆಗಾಗಿ ಎಸ್ಪಿ ನಾರಾಯಣ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು, ತನಿಖೆ ಕೈಗೊಂಡಿರುವ ಅಧಿಕಾರಿಗಳು ಆರೋಪಿಗಳಾಗಿ ಪೊಲೀಸರು ಬಲೆ ಬೀಸಿ ಹೊಸಕೋಟೆ, ಬೈಲು ನರಸಾಪುರ, ಎಸ್.ಹೊಸಹಳ್ಳಿ. ಶಿಡ್ಲಘಟ್ಟ, ಜಂಗಮ ಕೋಟೆ, ಚಿಕ್ಕಬಳ್ಳಾಪುರ, ಬೆಂಗಳೂರು ಟಿನ್ ಫ್ಯಾಕ್ಟರಿ, ವಿಲ್ಸ್ನ್ ಗಾರ್ಡನ್ ಮುಂತಾದ ಕಡೆ ಆರೋಪಿಗಳು ಸಂಚರಿಸಿದ್ದ ಬಗ್ಗೆ ಪತ್ತೆ ಹಚ್ಚಿದ ಪೊಲೀಸರು ಅಂತಿಮವಾಗಿ ಜಂಗಮ ಕೋಟೆ ಕ್ರಾಸ್ ಬಳಿ ಅಡಗಿದ್ದವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.