ತಲೆಮರೆಸಿಕೊಂಡಿದ್ದ 3 ರೌಡಿಗಳ ಬಂಧನ

CCB
Published on

ಬೆಂಗಳೂರು: ಹಳೇ ಪ್ರಕರಣಗಳಲ್ಲಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೂವರು ರೌಡಿಗಳು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ವಿವೇಕನಗರದ ರೌಡಿ ಮುತ್ತುರಾಜ್ ಅಲಿಯಾಸ್ ಅಮರೇನ್, ಪೀಣ್ಯದ ರವಿಕುಮಾರ್ ಹಾಗೂ ಮ್ಯಾಥ್ಯೂ ಬಂಧಿತರಾಗಿದ್ದು, ಈ ಮೂವರ ವಿರುದ್ಧ ನ್ಯಾಯಾಲಯಗಳು ಪ್ರತ್ಯೇಕವಾಗಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದವು. ವಿವೇಕನಗರ ರೌಡಿ ಮುತ್ತುರಾಜ್ ಮೇಲೆ ಒಟ್ಟು ೧೩ ಪ್ರಕರಣಗಳು ದಾಖಲಾಗಿದ್ದವು. ಆರ್.ಆರ್.ನಗರ ಠಾಣೆ ರೌಡಿ ಲೋಕೇಶ್ ಅಲಿಯಾಸ್ ಮುಲಾಮನ ಸಹಚರ ರವಿ ಕುಮಾರ್ ವಿರುದ್ಧ ೪, ವಿವೇಕನಗರದ ರೌಡಿ ಜಾರ್ಜ್ ಸಹಚರ ರಘುವರನ್ ಮೇಲೆ ೨ ಕೇಸ್‌ಗಳಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net