‘ಗಾಂಧಿ’ಗೆ ರೆಹಮಾನ್ ಸಂಗೀತ: ವೆಬ್‌ಸರಣಿಯತ್ತ ಮ್ಯೂಸಿಕ್ ಮಾಂತ್ರಿಕನ ಚಿತ್ತ

gandhi 2
Published on

ಸ್ಕರ್, ಗ್ರಾೃಮಿಯ ಜತೆ ಹಲವು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಖ್ಯಾತಿ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ಗೆ ಸಲ್ಲುತ್ತದೆ. ಮೂರು ದಶಕಗಳ ತಮ್ಮ ವೃತ್ತಿಯಲ್ಲಿ ರೆಹಮಾನ್ 140ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ಇದೀಗ ಮೊದಲ ಬಾರಿಗೆ ಅವರು ವೆಬ್‌ಸರಣಿಯೊಂದಕ್ಕೆ ಸಂಗೀತ ನೀಡುತ್ತಿದ್ದಾರೆ. ಸರಣಿಯ ಹೆಸರು ‘ಗಾಂಧಿ’. ಹಿಂದಿಯ ‘ಅಂಜಾನ್’, ‘ಸಿಟಿಲೈಟ್ಸ್’ ‘ಬಕಿಂಗ್‌ಹ್ಯಾಮ್ ಮರ್ಡರ್’ ಜತೆಗೆ ‘ಸ್ಕಾೃಮ್ 1992’ ವೆಬ್‌ಸರಣಿ ನಿರ್ದೇಶಿಸಿರುವ ಹನ್ಸಲ್ ಮೆಹ್ತಾ ‘ಗಾಂಧಿ’ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮೋಹನ್ ದಾಸ್ ಕರಮ್‌ಚಂದ್ ಗಾಂಧಿ ಎಂಬ ಸಾಮಾನ್ಯ ವಕೀಲ ರಾಷ್ಟ್ರಪಿತ ಹೇಗೆ ಆದರು ಎಂಬ ಐತಿಹಾಸಿಕ ಜರ್ನಿಯನ್ನು ತೋರಿಸುವ ಪ್ರಯತ್ನ ಅವರದು. ಗಾಂಧೀಜಿಯ ದಕ್ಷಿಣ ಆಫ್ರಿಕಾದ ಜೀವನ, ಭಾರತ ಸ್ವಾತಂತ್ರ್ಯ ಹೋರಾಟ ಹೀಗೆ ನಾನಾ ಅಂಶಗಳು ಇರಲಿವೆ. ಲೇಖಕ ರಾಮಚಂದ್ರ ಗುಹಾ ಅವರ ‘ಗಾಂಧಿ ಬಿಪೋರ್ ಇಂಡಿಯಾ’, ‘ ಗಾಂಧಿ: ದ ಇಯರ್ಸ್ ದಟ್ ಚೇಂಜ್ಡ್ ದ ವರ್ಲ್ಡ್’ ಪುಸ್ತಕಗಳನ್ನು ಅಧರಿಸಿ, ಈ ಸರಣಿಯ ಕಥೆಯನ್ನು ನಿರೂಪಿಸಲಾಗಿದೆ. ಸತ್ಯ, ಅಹಿಂಸೆ, ಪ್ರೀತಿಯನ್ನು ಜಗತ್ತಿಗೆ ಸಾರಿದ ಮಹಾತ್ಮನ ಸರಣಿಗೆ ರೆಹಮಾನ್ ಸಂಗೀತ ನೀಡುತ್ತಿರುವುದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಬಗ್ಗೆ ಅವರು, ‘ಗಾಂಧೀಜಿ ಅವರ ಜೀವನ ಆದರ್ಶಮಯ. ಸತ್ಯ, ಆಹಿಂಸೆ ಹಾಗೂ ಇತರ ಪ್ರಯೋಗಗಳು ಅವರ ಪಾತ್ರವನ್ನು ಪ್ರತಿನಿಧಿಸುತ್ತವೆ. ಈ ಕಥೆಗೆ ಸಂಗೀತ ನಿರ್ದೇಶಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದು ಸಂತಸ ಹಂಚಿಕೊಂಡಿದ್ದಾರೆ. ನಿರ್ದೇಶಕ ಹನ್ಸಲ್ ಮೆಹ್ತಾ, ‘ಗಾಂಧಿಯ ಬದುಕು ಇಂದಿನ ಯುವ ಜನತೆಗೆ ಸ್ಫೂರ್ತಿಯಾಗಲಿದೆ. ಈ ಪ್ರಯಾಣದಲ್ಲಿ ಎ.ಆರ್. ರೆಹಮಾನ್ ಜತೆಯಾಗಿರುವದು ನಮ್ಮ ಬಹುದಿನಗಳ ಕನಸು ನನಸಾಗಿದೆ’ ಎಂದಿದ್ದಾರೆ. ಹಿಂದಿ, ಗುಜರಾತಿ, ಇಂಗ್ಲಿಷ್‌ನಲ್ಲಿ ಮೂಡಿಬರಲಿರುವ ಈ ಸರಣಿಯಲ್ಲಿ ಪ್ರತೀಕ್ ಗಾಂಧಿ, ಭಾಮಿನಿ ಓಜಾ, ಟಾಮ್ ೆಲ್ಟನ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net