VIDEO | ಶೌಚಾಲಯದಿಂದ ಏಕಕಾಲಕ್ಕೆ ಹೊರಬಂದ 35 ಹಾವುಗಳು... ವಿಡಿಯೋ ನೋಡಿ

snakes
Published on

ನವದೆಹಲಿ: ಮನುಷ್ಯ ಹಾವನ್ನು ಕಂಡರೆ ಪ್ರಾಣ ಉಳಿಸಿಕೊಳ್ಳಲು ಓಡುತ್ತಾನೆ. ಆದರೆ ಶೌಚಾಲಯದಲ್ಲಿ ಏಕಕಾಲದಲ್ಲಿ 35 ಹಾವುಗಳು ಇರುವುದನ್ನು ನೀವು ನೋಡಿದರೆ ಏನಾಗುತ್ತದೆ? ಅಸ್ಸಾಂನ ನಗಾಂವ್ ಜಿಲ್ಲೆಯ ಕಲಿಯಾಬೋರ್ ಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿದೆ.

ಸುಮಾರು 35 ಹಾವುಗಳು ಒಂದೆ ಕಡೆ ಹರಿದಾಡುತ್ತಿರುವುದು ಕಂಡುಬಂದಿದೆ. ಈ ಹಾವುಗಳನ್ನು ಕಂಡ ತಕ್ಷಣ ಮನೆಯ ಮಾಲೀಕರು ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ.  ಮನೆಗೆ ನುಗ್ಗಿ ಆ ಹಾವುಗಳನ್ನೆಲ್ಲ ಒಟ್ಟಾಗಿ ಹೊರತೆಗೆದರು.

ಹೊಸದಾಗಿ ನಿರ್ಮಿಸಿರುವ ಶೌಚಾಲಯದಲ್ಲಿ ಮನೆಯಲ್ಲಿ ಸುಮಾರು 35 ಹಾವುಗಳು ತೆವಳುತ್ತಿದ್ದವು. ನಂತರ ಇವುಗಳನ್ನು ಜಾಗ್ರತವಾಗಿ ಹೊರಗೆ ತೆಗೆದು ಬಿಡಲಾಯ್ತು. ಆದರೆ ಈ ಹಾವುಗಳು ಹೇಗೆ ಇಲ್ಲಿಗೆ ಬಂದವು ಎನ್ನುವ ಕುರಿತಾಗಿ ತಿಳಿದು ಬಂದಿಲ್ಲ.

ಹಾವುಗಳು ಶೌಚಾಲಯದಲ್ಲಿ ಅಡಗಿರುವ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಶೌಚಾಲಯಕ್ಕೆ ಹಾವುಗಳು ಬರದಂತೆ ತಡೆಯಲು ಕೆಲವು ಕ್ರಮಗಳಿವೆ. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದದ್ದು. ಅಂತರ್ಜಾಲದಲ್ಲಿ ಅನೇಕರು ಇಂತಹ ಪ್ರಶ್ನೆಗಳನ್ನು ಕೇಳಿದ್ದಾರೆ.

ಸ್ನಾನಗೃಹದ ಕಿಟಕಿಗಳು ಮತ್ತು ಜಾರುವ ಬಾಗಿಲುಗಳನ್ನು ಮುಚ್ಚಿಡಿ. ಅಲ್ಲದೆ ಶೌಚಾಲಯದಲ್ಲಿನ ಜಾಲರಿಯನ್ನು ಸಂಪೂರ್ಣವಾಗಿ ಮುಚ್ಚಿ, ಹಾವು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ.

ಇಲಿಗಳು ನಿಮ್ಮ ಮನೆಗೆ ಬರದಂತೆ ತಡೆಯಿರಿ. ಹಾವುಗಳು ಆಹಾರದ ಹಾದಿಯನ್ನು ಅನುಸರಿಸುತ್ತವೆ, ಆದ್ದರಿಂದ ನಿಮ್ಮ ಮನೆಯ ಸುತ್ತಲೂ ಅಥವಾ ಒಳಗೆ ಇಲಿಗಳು ಇದ್ದರೆ, ಅವುಗಳನ್ನು ಸಾಧ್ಯವಾದಷ್ಟು ಬೇಗ ಅಲ್ಲಿಂದ ಹೊರತೆಗೆಯಿರಿ.

ನಿಮ್ಮ ಮನೆಯ ಸುತ್ತಲಿನ ಎಲ್ಲಾ ಪೊದೆಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು ಮತ್ತು ಸರಿಯಾಗಿ ಸುಡಬೇಕು,ನಿಮ್ಮ ಟಾಯ್ಲೆಟ್ ಸಿಂಕ್ ಅನ್ನು ಯಾವಾಗಲೂ ಹೊಗೆಯಿಂದ ಸ್ವಚ್ಛಗೊಳಿಸಿ.

 ಯಾವಾಗಲೂ ಕುಳಿತುಕೊಳ್ಳುವ ಮೊದಲು ನಿಮ್ಮ ಟಾಯ್ಲೆಟ್ ಸಿಂಕ್ ಅನ್ನು ಎಚ್ಚರಿಕೆಯಿಂದ ನೋಡಿ, ಕತ್ತಲೆಯಲ್ಲಿ ಶೌಚಾಲಯವನ್ನು ಬಳಸುವುದನ್ನು ತಪ್ಪಿಸಿ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದನ್ನು ತಪ್ಪಿಸಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net