ಯೋಧನಿಗೆ ಕರೊನಾ ವೈರಸ್​ ಸೋಂಕು ದೃಢ: ಸೈನಿಕರಿಗೆ ಏ.15ರವರೆಗೆ ರಜೆ ವಿಸ್ತರಣೆ

Indian Army
Published on

ಶ್ರೀನಗರ: ಯೋಧನಿಗೆ ಕರೊನಾ ವೈರಸ್​ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಯೋಧರಿಗೆ ನೀಡಿದ್ದ ರಜೆಯನ್ನು ಭಾರತೀಯ ಸೇನೆ ಏಪ್ರಿಲ್​ 15ರವರೆಗೆ ವಿಸ್ತರಿಸಿದೆ.

ಲಡಾಖ್ ಸ್ಕೌಟ್ಸ್ ರೆಜಿಮೆಂಟ್‌ನ ಯೋಧನೊಬ್ಬನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೈನಿಕರಿಗೆ ರಜೆ ಘೋಷಿಸಿರುವುದರ ಜತೆಗೆ ಎಲ್ಲ ರೀತಿಯ ನೇಮಕಾತಿಯನ್ನು ಮುಂದೂಡಿದೆ.

ಯೋಧರಿಗೆ ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಲಾಗಿದೆ. ಸೇನಾ ವೈದ್ಯಕೀಯ ಸೇವೆ ಹೊರತಾಗಿ ಎಲ್ಲರಿಗೂ ರಜೆ ನೀಡಲಾಗಿದೆ. ಸೇನಾ ಅಧಿಕಾರಿಗಳು ವಿದೇಶಕ್ಕೆ ತೆರಳದಂತೆ ಸೂಚಿಸಲಾಗಿದೆ.

ರಾಷ್ಟ್ರದಲ್ಲಿ ಕರೊನಾ ವೈರಸ್​ ಸೋಂಕಿಗೆ 5 ಮಂದಿ ಬಲಿಯಾಗಿದ್ದು ಹಲವು ಮಂದಿಗೆ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸೋಂಕು ಹರಡುವುದನ್ನು ತಡೆಗಟ್ಟಲು ಈ ನಿರ್ಧಾರಕ್ಕೆ ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net