ಪಹಲ್ಗಾಮ್​ ಮಾಸ್ಟರ್​ಮೈಂಡ್​​ ಸುಲೆಮಾನ್​ ಸೇರಿ 3 ಉಗ್ರರ ಹತ್ಯೆ ಮಾಡಿದ ಭದ್ರತಾ ಪಡೆ: ವರದಿ | Pahalgam

Untitled design (82) (1)
Published on

Pahalgam: ಜಮ್ಮು-ಕಾಶ್ಮಿರದ ಡಚಿಗಾಮ್ ರಾಷ್ಟ್ರೀಯ ಉದ್ಯಾನವನದ ಬಳಿಯ ಹರ್ವಾನ್​​ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸೇನಾ ಕಾರ್ಯಚರಣೆಯಲ್ಲಿ ಪಹಲ್ಗಾಮ್ ಮಾಸ್ಟರ್​ಮೈಂಡ್​ ಭಯೋತ್ಪದಕ ಸುಲೆಮಾನ್​​ ಸೇರಿ 3 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೋಮವಾರ ವರದಿಯಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸುಲೇಮಾನ್ ಶಾ ಎನ್ಕೌಂಟರ್ ಸಮಯದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬರು ಎಂದು ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ.

ಆದಾಗ್ಯೂ, ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಮತ್ತು ಅದು ಮುಗಿದ ನಂತರವೇ ಅವರು ಅಧಿಕೃತ ಹೇಳಿಕೆಯನ್ನು ನೀಡಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಆಪರೇಷನ್ ಮಹಾದೇವ್ ಎಂಬ ಹೆಸರು ಹೊಂದಿರುವ ಕಾರ್ಯಚರಣೆಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇದನ್ನು ನಡೆಸಿದ್ದರು ಎಂದು ಭಾರತೀಯ ಸೇನೆಯ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net