ಭಯೋತ್ಪಾದನೆಯನ್ನೇ ರಾಜ್ಯ ನೀತಿಯನ್ನಾಗಿಸಿಕೊಂಡ ಪಾಕಿಸ್ತಾನ; ನೂತನ ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರಾವಣೆ ಕಿಡಿ

NARVANE
Published on

ನವದೆಹಲಿ: ನೆರೆ ರಾಷ್ಟ್ರ ಭಯೋತ್ಪಾದನೆಯನ್ನೇ ರಾಜ್ಯ ನೀತಿಯನ್ನಾಗಿಸಿಕೊಂಡಿದೆ ಎಂದು ಪಾಕಿಸ್ತಾನದ ವಿರುದ್ಧ ನೂತನ ಸೇನಾ ಮುಖ್ಯಸ್ಥ ಜನರಲ್​ ಮುಕುಂದ್​ ನರಾವಣೆ ಕಿಡಿ ಕಾರಿದ್ದಾರೆ.

ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಸಂದರ್ಶನ ನೀಡಿದ ಅವರು, ಭಯೋತ್ಪಾದನೆ ಎಂಬುದು ಈಗ ಜಾಗತಿಕ ಸಮಸ್ಯೆಯಾಗಿದೆ. ಇದರಿಂದ ಭಾರತವು ಹೊರತಾಗಿಲ್ಲ. ಈಗ ಪ್ರಪಂಚ ಮತ್ತು ಹಲವು ದೇಶಗಳು ಭಯೋತ್ಪಾದನೆ ಕರಿ ನೆರಳಿನ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದಿದ್ದಾರೆ

ನಮ್ಮ ನೆರೆ ದೇಶ ಭಯೋತ್ಪಾದನೆಯನ್ನು ಬಳಸಿ ನಮ್ಮ ಮೇಲೆ ಯುದ್ಧ ಸಾರುತ್ತಿರುತ್ತದೆ. ನಾವು ಈ ಬಗ್ಗೆ ಶಾಂತಿ ಕಾಪಾಡಿಕೊಂಡಿದ್ದೇವೆ. ಆದರೆ ಆ ದೇಶಕ್ಕೆ ಉಳಿಗಾಲವಿಲ್ಲ. ಎಲ್ಲ ಸಮಯದಲ್ಲೂ ಎಲ್ಲರನ್ನು ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

370 ನೇ ವಿಧಿ ರದ್ದು ಮಾಡಿರುವುದರಿಂದ ಜಮ್ಮು ಕಾಶ್ಮೀರದ ಅಭಿವೃದ್ಧಿಯಾಗಲಿದೆ. ಈಗ ಅಲ್ಲಿ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಇದು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಉತ್ತಮವಾಗಿದೆ. ಇದರಿಂದ ಅಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ನರಾವಣೆ ಹೇಳಿದರು.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net