Arjun Sarja - "ಬ್ಲಾಸ್ಟ್​' ಬಸ್ಟರ್​ ಸಕ್ಸಸ್​

Arjun Sarja
Arjun Sarja
Published on
Arjun Sarja -
ಬಹುಭಾಷಾ ನಟ ಅರ್ಜುನ್​ ಸರ್ಜಾ ನಟನೆಯ 160ನೇ ಸಿನಿಮಾ "ಬ್ಲಾಸ್ಟ್​'. ಕಳೆದ ಮೇ. 28ರಂದು ತೆರೆಗೆ ಬಂದ ಈ ಆ್ಯಕ್ಷನ್​ ಥ್ರಿಲ್ಲರ್​ ಚಿತ್ರಕ್ಕೆ ಯುವ ನಿರ್ದೇಶಕ ಸುಭಾಷ್​ ಕೆ. ರಾಜ್​ ಆ್ಯಕ್ಷನ್​&ಕಟ್​ ಹೇಳಿದ್ದಾರೆ. ಮೂಲಗಳ ಪ್ರಕಾರ $18 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ, ವಿಶ್ವಾದ್ಯಂತ $80 ಕೋಟಿ ಕಲೆಕ್ಷನ್​ ಮಾಡಿಕೊಂಡಿದೆ. ಆ ಮೂಲಕ ಈ ವರ್ಷದ ಅತ್ಯಂತ ಯಶಸ್ವಿ ತಮಿಳು ಸಿನಿಮಾ ಎನಿಸಿಕೊಂಡಿದೆ. ಹಾಗೇ ಥಿಯೇಟರ್​ಗಳಲ್ಲಿ ಬಿಡುಗಡೆಯಾದ ಕೇವಲ 29 ದಿನಗಳಲ್ಲಿ ಅರ್ಥಾತ್​ ಜೂನ್​ 25ರಂದು "ಬ್ಲಾಸ್ಟ್​' ಒಟಿಟಿಯಲ್ಲೂ ರಿಲೀಸ್​ ಆಗಿದ್ದು, ಅಲ್ಲೂ ಕಳೆದ ಐದು ದಿನಗಳಿಂದ ಭಾರತದಾದ್ಯಂತ ಮೊದಲ ಸ್ಥಾನದಲ್ಲಿ ಟ್ರೆಂಡಿಂಗ್​ನಲ್ಲಿದೆ. ಆ ಮೂಲಕ ಥಿಯೇಟರ್​ನಲ್ಲಿ ಪ್ರೇಕ್ಷಕರ ಮೇಲೆ ಮೋಡಿ ಮಾಡಿದ ಬಳಿಕ "ಬ್ಲಾಸ್ಟ್​' ಒಟಿಟಿಯಲ್ಲಿ ವೀಕ್ಷಕರ ಮೇಲೂ ತನ್ನ ಮ್ಯಾಜಿಕ್​ ಮುಂದುವರಿಸಿದೆ. &ಏಜೆನ್ಸೀಸ್​

ಆ್ಯಕ್ಷನ್​ ಥ್ರಿಲ್ಲರ್​ ಹಂಗಾಮ

"ಬ್ಲಾಸ್ಟ್​' ಒಬ್ಬ ಕರಾಟೆ ಶಿಕ್ಷಕನ ಕುರಿತ ಕಥೆಯಾಗಿದ್ದು, ಕರಾಟೆ ಕೋಚ್​ ರಾಜಾರಾಮ್​ ಪಾತ್ರದಲ್ಲಿ ಅರ್ಜುನ್​ ಸರ್ಜಾ ನಟಿಸಿದ್ದಾರೆ. ಅವರ ಪತ್ನಿ ನೀಲವೇಣಿಯಾಗಿ ಅಭಿರಾಮಿ ಮತ್ತು ಪುತ್ರಿ ನೀಲಾ ಪಾತ್ರದಲ್ಲಿ ಪ್ರೀತಿ ಮುಕುಂದನ್​ ಕಾಣಿಸಿಕೊಂಡಿದ್ದಾರೆ. ತಾವಾಯಿತು, ತಮ್ಮ ಕೆಲಸವಾಯಿತು ಅಂತ ತಮ್ಮ ಪಾಡಿಗಿದ್ದ ರಾಜಾರಾಮ್​ ಮತ್ತು ಕುಟುಂಬ ದೊಡ್ಡ ಬಿಜಿನೆಸ್​ ಮಾಫಿಯಾದ ಕೆಂಗಣ್ಣಿಗೆ ಗುರಿಯಾಗಿ, ಅವರಿಂದ ಹೇಗೆ ಬಚಾವಾಗುತ್ತಾರೆ ಎಂಬುದರ ಸುತ್ತ "ಬ್ಲಾಸ್ಟ್​' ಕಥೆ ಸಾಗುತ್ತದೆ. ಪ್ರತಿ ಹಂತದಲ್ಲೂ ಬರುವ ಟ್ವಿಸ್ಟ್​ಗಳು, ಆ್ಯಕ್ಷನ್​ ದೃಶ್ಯಗಳು 143 ನಿಮಿಷಗಳ ಚಿತ್ರವನ್ನು ಎಲ್ಲೂ ಬೋರ್​ ಆಗದಂತೆ ನೋಡಿಸಿಕೊಂಡು ಹೋಗುತ್ತವೆ. ಹಾಗೇ ಸಮರಕಲಾ ಪ್ರವಿಣರಾದ ಅರ್ಜುನ್​ ಸರ್ಜಾ ಕೂಡ ಲೀಲಾಜಾಲವಾಗಿ ನಟಿಸಿದ್ದು, ಅಭಿರಾಮಿ, ಪ್ರೀತಿ, ಜಾನ್​ ಕೊಕ್ಕೇನ್​, ವಿವೇಕ್​ ಪ್ರಸನ್ನ ಕೂಡ ಗಮನ ಸೆಳೆಯುತ್ತಾರೆ.

ಸಣ್ಣ ಚಿತ್ರಗಳ ಸಂಭ್ರಮ

"ಬ್ಲಾಸ್ಟ್​' ಮಾತ್ರವಲ್ಲ ಈ ವರ್ಷ ಕಾಲಿವುಡ್​ನಲ್ಲಿ ಸಣ್ಣ ಬಜೆಟ್​ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. 2026ರಲ್ಲಿ ಮೊದಲ ಆರು ತಿಂಗಳಲ್ಲಿ ರಿಲೀಸ್​ ಆಗಿರುವ 95 ತಮಿಳು ಚಿತ್ರಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿಕೊಂಡ ಟಾಪ್​ 10 ಚಿತ್ರಗಳಲ್ಲಿ ಐದು ಸಣ್ಣ ಹಾಗೂ ಮಧ್ಯಮ ಬಜೆಟ್​ ಚಿತ್ರಗಳೂ ಸ್ಥಾನ ಪಡೆದಿವೆ. "ಬ್ಲಾಸ್ಟ್​' ಜತೆಗೆ "ತಾಯಿ ಕಿಳವಿ' (₹78 ಕೋಟಿ), "ಯೂಥ್​' (75 ಕೋಟಿ), "ತಲೈವರ್​ ತಂಬಿ ತಲೈಮೈಯಿಲ್​' (40 ಕೋಟಿ), "ವಿತ್​ ಲವ್​' (39 ಕೋಟಿ) ಟಾಪ್​ 10ರಲ್ಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net