‘ಪೊಲಿಮೆರ 3’ನಲ್ಲಿ ಅರ್ಜುನ್ ಸರ್ಜಾ : ‘ಬ್ಲಾಸ್ಟ್’ ಬಳಿಕ ತೆಲುಗಿನ ಥ್ರಿಲ್ಲರ್ ಟ್ರಿಕ್ವೆಲ್‌ನಲ್ಲಿ ಬಹುಭಾಷಾ ನಟ

ಅರ್ಜುನ್ ಸರ್ಜಾ
ಅರ್ಜುನ್ ಸರ್ಜಾ
Published on

ಪ್ರಮುಖ ಮುಖ್ಯಾಂಶಗಳು

  • ಥ್ರಿಲ್ಲರ್ ಟ್ರೆಕ್ವೆಲ್​ ನಲ್ಲಿ ಆ್ಯಕ್ಷನ್ ಕಿಂಗ್
  • ಆ್ಯಕ್ಷನ್ ಬಳಿಕ ಥ್ರಿಲ್ಲರ್ ವಿಷಯ ಆಯ್ಕೆಮಾಡಿಕೊಂಡ ಬಹುಭಾಷಾ ನಟ
  • ಡಾ. ಅನಿಲ್ ವಿಶ್ವನಾಥ್ ನಿರ್ದೇಶನದ ಸಿನಿಮಾ
ತಮಿಳಿನ ಹಿಟ್ ‘ಬ್ಲಾಸ್ಟ್’ ಸಿನಿಮಾ ಮೂಲಕ ಅರ್ಜುನ್ ಸರ್ಜಾ ಮಿಂಚಿದ್ದರು. ಕಳೆದ ಮೇ 28ರಂದು ರಿಲೀಸ್ ಆಗಿದ್ದ ಈ ಸಿನಿಮಾ ಥಿಯೇಟರ್‌ನಲ್ಲಿ ಉತ್ತಮ ಸಾಧನೆ ಮಾಡಿತ್ತು. ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಿ ಮತ್ತಷ್ಟು ಪ್ರಚಾರಗೊಂಡು ಹೆಚ್ಚು ಮಂದಿ ವೀಕ್ಷಿಸಿದ್ದರು. ಇಲ್ಲಿ ಅರ್ಜುನ್ ಸರ್ಜಾ ಕರಾಟೆ ಮಾಸ್ಟರ್‌ಆಗಿ ಮಿಂಚಿದ್ದರು. ‘ಬ್ಲಾಸ್ಟ್’ ಸಕ್ಸಸ್‌ನ ಸಂಭ್ರಮದಲ್ಲಿರುವ ನಟ ಇದೀಗ ತೆಲುಗಿನ ಯಶಸ್ವಿ ಸಿನಿಮಾದ ಟ್ರಿಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ. ಅದೇ ‘ಪೊಲಿಮೆರ 3’. ಡಾ. ಅನಿಲ್ ವಿಶ್ವನಾಥ್​ ನಿರ್ದೇಶನದ ಸಕ್ಸಸ್‌ಫುಲ್ ಪ್ರಾಂಚೈಸಿ ‘ಪೊಲಿಮೆರ’. ಈ ಸರಣಿಯ ಮೊದಲ ಭಾಗ ‘ಮಾ ಓರಿ ಪೊಲಿಮೆರ’ (2021) ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿ, ಯಶಸ್ವಿಯಾಗಿತ್ತು. ಬಳಿಕ ಅನಿಲ್ 2023ರಲ್ಲಿ ‘ಪೊಲಿಮೆರ 2’ ತೆರೆಗೆ ತಂದಿದ್ದರು. ಸೀಕ್ವೆಲ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೂರು ವರ್ಷಗಳ ಬಳಿಕ ‘ಪೊಲಿಮೆರ 3’ನೊಂದಿಗೆ ವಾಪಸ್ಸಾಗಿದ್ದಾರೆ. ಈ ಥ್ರಿಲ್ಲರ್ ಟ್ರಿಕ್ವೆಲ್‌ನಲ್ಲಿ ಅರ್ಜುನ್ ಸರ್ಜಾ ನಟಿಸುವುದು ಪಕ್ಕಾ ಆಗಿದೆ. ಈ ಹಿಂದಿನ ಎರಡು ಭಾಗಗಳ ಸಕ್ಸಸ್ ಕಂಡ ಅರ್ಜುನ್ ಖುಷಿಗೊಂಡಿದ್ದು, ಹಾಗಾಗಿ, ಈ ಟ್ರಿಕ್ವೆಲ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅರ್ಜುನ್ ಸರ್ಜಾ ಜತೆಗೆ ಈ ಹಿಂದೆ ಎರಡು ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಸತ್ಯಂ ರಾಜೇಶ್, ಬಾಲಾದಿತ್ಯ, ಕಾಮಾಕ್ಷಿ, ಗೆಟಪ್ ಶ್ರೀನು ಮೂರನೇ ಭಾಗದಲ್ಲೂ ಮುಂದುವರಿಯಲಿದ್ದಾರೆ. ‘ಬ್ಲಾಸ್ಟ್ ’ ಬಳಿಕ ಅರ್ಜುನ್ ಸರ್ಜಾ ಮತ್ತೊಂದು ಥ್ರಿಲ್ಲರ್ ಕಥೆಯಲ್ಲಿ ನಟಿಸುತ್ತಿರುವುದರಿಂದ ಅವರ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.-ಏಜೆನ್ಸೀಸ್
ಸೀನಿಯರ್ ಸರ್ಜಾ ಮೀಟ್ಸ್ ಸಿಎಂ
ಬಹುಭಾಷಾ ನಟ ಅರ್ಜುನ್ ಸರ್ಜಾ ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ವಿಧಾನಸೌಧ ಕಚೇರಿಯಲ್ಲಿ ಸಿಎಂ ಅವರ ಜತೆ ಸಮಾಲೋಚನೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net