ಬ್ರೇಕ್​ಅಪ್​ ವದಂತಿ ನಡುವೆಯೇ ಒಟ್ಟಾಗಿ ಕಾಣಿಸಿಕೊಂಡ ಅರ್ಜುನ್​-ಮಲೈಕಾ

Malaika Arjun
Published on

ಮುಂಬೈ: ಈ ಹಿಂದೆ ಬಾಲಿವುಡ್​ನ ಲವ್​ಬರ್ಡ್ಸ್​ಗಳಾದ ಮಲೈಕಾ ಅರೋರ ಹಾಗೂ ಅರ್ಜುನ್​ ಕಪೂರ್​ ಸಂಬಂಧ ಕಡಿದುಕೊಂಡಿದ್ದಾರೆ ಎಂದು ವದಂತಿ ವ್ಯಾಪಕವಾಗಿ ಹರಿದಾಡಿತ್ತು. ಭಿನ್ನಾಭಿಪ್ರಾಯಗಳ ಕಾರಣ ಈ ಇಬ್ಬರು ದೂರ ಆಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಬ್ರೇಕ್​ ಹಾಕಲು ಈ ಜೋಡಿ ಮುಂದಾಗಿದ್ದು, ಒಟ್ಟಾಗಿ ಕಾಣಿಸಿಕೊಂಡಿದ್ದಾರೆ

ಮಲೈಕಾ-ಅರ್ಜುನ್ ನಡುವೆ ಬಿರುಕು ವದಂತಿ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಮಲೈಕಾ ಅವರು ಗೆಳೆಯ ಅರ್ಜುನ್ ಕಪೂರ್ ಜೊತೆಗೆ ತಮ್ಮ ಸ್ನೇಹಿತೆ ಕರಿಷ್ಮಾ ಕರಮಚಂದಾನಿ ಅವರ ಪ್ರೀ ವೆಡ್ಡಿಂಗ್​​ ಸೆಲೆಬ್ರೇಶನ್​ನಲ್ಲಿ ಭಾಗಿಯಾಗಿದ್ದು, ಫೋಟೋ-ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಮಲೈಕಾ ಅವರು ಹಸಿರು ಲೆಹೆಂಗಾದಲ್ಲಿ ಕಂಗೊಳಿಸಿದರೆ, ಅರ್ಜುನ್ ಕಪೂರ್ ಕುರ್ತಾ ಪೈಜಾಮಾದಲ್ಲಿ ಕಾಣಿಸಿಕೊಂಡರು. ಮತ್ತೊಂದು ಫೋಟೋದಲ್ಲಿ, ಮಲೈಕಾ ಮತ್ತು ಅರ್ಜುನ್ ತಮ್ಮ ಸ್ನೇಹಿತರಾದ ಕುನಾಲ್ ರಾವಲ್, ಅರ್ಪಿತಾ ಮೆಹ್ತಾ ಮತ್ತು ಆವಂತಿಕಾ ಮಲಿಕ್ ಅವರೊಂದಿಗೆ ಸಂಭ್ರಮಾಚರಿಸುತ್ತಿರೋದನ್ನು ನೋಡಬಹುದಾಗಿದೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಧು-ವರರ ಫೋಟೋ ಹಂಚಿಕೊಂಡ ಮಲೈಕಾ, ಅಭಿನಂದನೆಗಳು ಮಿಸ್ಟರ್ ಆ್ಯಂಡ್ ಮಿಸೆಸ್ , ಎಂದೆಂದಿಗೂ ಪ್ರೀತಿ, ಖುಷಿ ಇರಲಿ ಎಂದು ಶುಭ ಹಾರೈಸಿದ್ದಾರೆ.

Arjun Malaika

ಕರಿಷ್ಮಾ ಕರಮಚಂದಾನಿ ಅವರ ಪ್ರೀ ವೆಡ್ಡಿಂಗ್​​ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವರು ಕಾಣಿಸಿಕೊಂಡಿದ್ದಾರೆ. ನಟಿ ಸೋನಂ ಕಪೂರ್, ಅರ್ಜುನ್ ಅವರ ಸಹೋದರಿ ಅಂಶುಲಾ ಕಪೂರ್, ನಿರ್ಮಾಪಕಿ ರಿಯಾ ಕಪೂರ್, ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಆವಂತಿಕಾ ಮಲಿಕ್ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಫೋಟೋದಲ್ಲಿ ಮಲೈಕಾ ಅರೋರಾ, ಅರ್ಜುನ್ ಕಪೂರ್, ವಧು ಮತ್ತು ಹೆಸರಾಂತ ಫ್ಯಾಷನ್ ಡಿಸೈನರ್ ಅರ್ಪಿತಾ ಮೆಹ್ತಾ ಸೇರಿದಂತೆ ಕೆಲವರು ಕಾಣಿಸಿಕೊಂಡಿದ್ದಾರೆ.

ಫರಾ ಖಾನ್ ಜೊತೆಗೆ ಜಲಕ್ ದಿಖ್ಲಾ ಜಾ ಶೋನಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿರುವ ನಟಿ ಮಲೈಕಾ ಅರೋರಾ, ಇತ್ತೀಚಿನ ಸಂಚಿಕೆಯಲ್ಲಿ ಮರುಮದುವೆ ಬಗ್ಗೆ ಸುಳಿವು ನೀಡಿದ್ದರು. ಮಾಜಿ ಪತಿ ಅರ್ಬಾಜ್ ಖಾನ್ ಕೂಡ ಇತ್ತೀಚೆಗಷ್ಟೇ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಮದುವೆ ಆಗಿದ್ದು, ಅದರ ಬೆನ್ನಲ್ಲೇ ಮಲೈಕಾ ಅರೋರಾ ಮಾತನಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net