

ನವದೆಹಲಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಗಸ್ಟ್ 18 ರ ಮಂಗಳವಾರ ಅಟಲ್ ನಾವೀನ್ಯತೆ ಸಾಧನಾ ಸಂಸ್ಥೆಗಳ ಶ್ರೇಯಾಂಕ (ARIIA 2020)ವನ್ನು ಪ್ರಕಟಿಸಲಿದ್ದಾರೆ.
ಸಚಿವರಾದ ರಮೇಶ್ ಪೋಖ್ರಿಯಲ್ ಮತ್ತು ಸಂಜಯ್ ಶಾಮ್ರಾವ್ ಧೋತ್ರೆ ಅವರ ಸಮ್ಮುಖದಲ್ಲಿ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಲಾಗುವುದು.
ಈ ವರ್ಷ, ಕರೋನವೈರಸ್ ನಿಂದಾಗಿ ARIIA 2020 ಶ್ರೇಯಾಂಕಗಳನ್ನು ವರ್ಚುವಲ್ ಆಗಿ ಘೋಷಿಸಲಾಗುವುದು.
ARIIA ಎನ್ನುವುದು ಮಾನವ ಸಂಪನ್ಮೂಲ ಸಚಿವಾಲಯದ ಒಂದು ಉಪಕ್ರಮವಾಗಿದ್ದು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ನಾವೀನ್ಯತೆ, ಸ್ಟಾರ್ಟ್ಅಪ್ ಮತ್ತು ಉದ್ಯಮಶೀಲತೆ ಅಭಿವೃದ್ಧಿಗೆ ಸಂಬಂಧಿಸಿದ ಸೂಚಕಗಳ ಮೇಲೆ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ಶ್ರೇಣೀಕರಿಸಲು ಭಾರತ ಸರ್ಕಾರದ AICTE ಮತ್ತು ಸಚಿವಾಲಯದ ಇನ್ನೋವೇಶನ್ ಸೆಲ್ ಜಾರಿಗೆ ತಂದಿದೆ.