ಆನ್​ಲೈನ್​ ಸಂಸತ್ ಅಧಿವೇಶನದ ನಡುವೆಯೇ ಪತ್ನಿಯ ಸ್ತನ ಚುಂಬಿಸಿದ ಸಂಸದ: ವಿಡಿಯೋ ವೈರಲ್​! ​

MP
Published on

ಬ್ಯೂನಸ್​ ಐರೀಸ್​: ಕರೊನಾದಿಂದಾಗಿ ಬಹುತೇಕ ಸರ್ಕಾರಿ ಮತ್ತು ಖಾಸಗಿ ಸಭೆಗಳೆಲ್ಲ ಆನ್​ಲೈನ್​ನಲ್ಲಿ ನಡೆಯುತ್ತಿವೆ. ವರ್ಚುವಲ್​ ಸಭೆಗಳು ಆರಂಭವಾದಗಿನಿಂದ ಒಂದಲ್ಲ ಒಂದು ಮುಜುಗರ ಪಡುವಂತಹ ಘಟನೆಗಳ ವರದಿಯಾಗುತ್ತಲೇ ಇವೆ.

ಅರ್ಜೆಂಟೀನಾದ ಸಂಸದರೊಬ್ಬರು ಆನ್​ಲೈನ್​ ಸಂಸತ್​ ಅಧಿವೇಶನದ ನಡುವೆಯೇ ಪತ್ನಿಯ ಸ್ತನವನ್ನು ಚುಂಬಿಸಿದಕ್ಕೆ ಸಂಸ್ಪೆಂಡ್​ ಆಗಿದ್ದು, ಇದೀಗ ನೈತಿಕ ಹೊಣೆ ಹೊತ್ತು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೂರು ಮಕ್ಕಳ ತಂದೆಯಾಗಿರುವ ಸಂಸದ ಜುವಾನ್​ ಎಮಿಲಿಯೋ ಅಮೇರಿ ಆನ್​ಲೈನ್​ ಅಧಿವೇಶನದ ವೇಳೆ ತಮ್ಮ ತೊಡೆಯ ಮೇಲೆ ಪತ್ನಿಯನ್ನು ಕುಳ್ಳಿರಿಸಿಕೊಂಡು ಸ್ತನಗಳಿಗೆ ಚುಂಬಿಸುವ ಮೂಲಕ ತಮ್ಮ ಸಹ ಸಂಸದರುಗಳನ್ನು ಮುಜುಗರಕ್ಕೀಡು ಮಾಡಿದರು. ಅಲ್ಲದೆ, ಇದೇ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಸಂಸದರ ದುರ್ವತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅರ್ಜೆಂಟೀನಾದ ವಾಯುವ್ಯ ಪ್ರಾಂತ್ಯ ಸಾಲ್ಟಾದ ಆಡಳಿತಾರೂಢ ಫ್ರೆಂಟೆ ಡಿ ಟೋಡ್ಸ್​ ಮೈತ್ರಿ ಸರ್ಕಾರವು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, 48 ವರ್ಷದ ಜುವಾನ್​ ಎಮಿಲಿಯೋರನ್ನು ಸಂಸ್ಪೆಂಡ್​ ಮಾಡಿ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದೆ. ಅಲ್ಲದೆ, ಸಹ ಸಂಸದರು ಸಹ ಎಮಿಲಿಯೋ ವಿರುದ್ಧ ಮತ ಚಲಾಯಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಮಿಲಿಯೋ ಎಲ್ಲರ ಒತ್ತಡಕ್ಕೆ ಮಣಿಸು ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಎಮಿಲಿಯೋ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ.

ಸಂಸದರಾಗಿ ಆಯ್ಕೆಯಾದ ಆರಂಭದಲ್ಲೇ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎಮಿಲಿಯೋ ವಿರುದ್ಧ ಕಳೆದ ಡಿಸೆಂಬರ್​ನಲ್ಲಿ ಕೇಳಿಬಂದಿತ್ತು. ಆದರೆ, ಆರಂಭದಲ್ಲಿ ಸಬೂಬು ನೀಡಿ ಸಂಸದರು ಬಚಾವ್​ ಆಗಿದ್ದರು. ಇದೀಗ ಸಂಸದರ ದುರ್ವತನೆ ಹಿಂದಿನ ಘಟನೆಯ ಮೇಲೆ ಅನುಮಾನ ಮೂಡಿಸಿದ್ದು, ಸಂಸದರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net