ಅಪ್ಪ ನೀವು ಸಾಯುತ್ತೀರಾ? ರಕ್ತದ ಮಡುವಿನಲ್ಲಿದ್ದ ಸೈಫ್ ಅಲಿ ಖಾನ್‌ಗೆ  ತೈಮೂರ್ ಕೇಳಿದ ಪ್ರಶ್ನೆ.. Saif Ali Khan recalls Taimur reaction after knife attack

saifalikhan
Published on

ಮುಂಬೈ: ( Saif Ali Khan recalls Taimur reaction after knife attack ) ಜನವರಿ 16 ರಂದು ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಕಳ್ಳತನದ ಉದ್ದೇಶದಿಂದ ಮನೆಗೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯೊಬ್ಬ ಜೆಹ್‌ನ ಕೋಣೆಗೆ ಹೋಗಿ ಹಣಕ್ಕಾಗಿ ಬೇಡಿಕೆ ಇಡಲು ಪ್ರಾರಂಭಿಸಿದನು. ಇದನ್ನು ನೋಡಿದ ಸೈಫ್ ಅವನನ್ನು ತಡೆದನು. ಈ ಗಲಾಟೆಯಲ್ಲಿ  ಸೈಫ್​ಗೆ ಚಾಕುವಿನಿಂದ ಇರಿದು ಕಳ್ಳ ಪರಾರಿಯಾಗಿದ್ದನು. ಇದೆಲ್ಲವೂ ತೈಮೂರ್-ಜೆಹ್ ಅವರ ಕಣ್ಣ ಮುಂದೆಯೇ ನಡೆಯಿತು.

ದಾಳಿಯ ನಂತರ, ಸೈಫ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್ ಮತ್ತು ಆಟೋ ರಿಕ್ಷಾವನ್ನು ಕರೆಯುತ್ತಿದ್ದಾಗ, 8 ವರ್ಷದ ತೈಮೂರ್ ತನ್ನ ತಂದೆಯನ್ನು ಕೇಳಿದ ಪ್ರಶ್ನೆ ಕುರಿತಾಗಿ ಸೈಫ್​ ಸಂದರ್ಶನವೊಂದರಲ್ಲಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಸೈಫ್ ಅಲಿ ಖಾನ್ ಟೈಮ್ಸ್ ಆಫ್ ಇಂಡಿಯಾ ಜೊತೆ ವಿಶೇಷ ಸಂವಾದ ನಡೆಸಿದರು . ಈ ಸಮಯದಲ್ಲಿ, ದಾಳಿಯ ರಾತ್ರಿ ತನ್ನ ಮಗ ಕೇಳಿದ ಮೊದಲ ಪ್ರಶ್ನೆ ಇದು ಎಂದು ಅವರು ಹೇಳಿದರು. ನೀವು ಸಾಯುತ್ತೀರಾ? ಎನ್ನುವ ತೈಮೂರ್ ಅವರ ಈ ಪ್ರಶ್ನೆಗೆ ಸೈಫ್  ಏನು ಹೇಳಿದರು ಎನ್ನುವ ಕುರಿತಾಗಿ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಮೇಲೆ ಚಾಕುವಿನಿಂದ ಹಲ್ಲೆಯಾದಾಗ ತೀವ್ರ ಗಾಯಗಳು ಆಗಿದ್ದವು. ಇಡೀ ಅಂಗಿಯೆಲ್ಲ ರಕ್ತಸಿಕ್ತವಾಗಿತ್ತು. ಹಿರಿಯ ಮಗ ತೈಮೂರ್, ಪುಟ್ಟ ಮಗ ಜೇಹ್, ಕರೀನಾ ಕೂಡಲೇ ಕಟ್ಟಡದ ಕೆಳಗೆ ಬಂದರು. ಆಟೋ, ಕ್ಯಾಬ್ ಯಾವುದೇ ಸಿಕ್ಕರೂ ಸರಿ, ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂಬುದು ಅವರ ಆಶಯವಾಗಿತ್ತು. ನನಗೆ ತುಂಬ ನೋವಾಗುತ್ತಿತ್ತು. ನನ್ನ ಬೆನ್ನಿಗೆ ಏನೋ ದೊಡ್ಡ ಗಾಯವಾಗಿದೆ ಎಂದು ಅನ್ನಿಸುತ್ತಿತ್ತು. ಕರೀನಾ ಹಲವರಿಗೆ ಫೋನ್ ಮಾಡಲು ಯತ್ನಿಸುತ್ತಿದ್ದಳು. ತ್ರೈಮೂರ್‌ಗೆ ಕೂಡ ನನ್ನ ಬಗ್ಗೆ ಚಿಂತೆಯಾಗಿತ್ತು. ಅವನು ನನ್ನ ಬಳಿ ನೇರವಾಗಿಯೇ ಕೇಳಿದ್ದ..'ಅಪ್ಪಾ ನೀನು ಸಾಯುತ್ತೀಯಾ?' ಎಂದು ಪ್ರಶ್ನಿಸಿದ್ದ. ಅದಕ್ಕೆ ನಾನು 'ಇಲ್ಲ, ನನಗೇನೂ ಆಗೋದಿಲ್ಲ' ಎಂದು ಉತ್ತರಿಸಿದೆ ಎಂದು ಸೈಫ್ ಅಲಿ ಖಾನ್ ಹೇಳಿಕೊಂಡಿದ್ದಾರೆ. ದಾಳಿಯ ನಂತರ ತೈಮೂರ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ಹೇಳುತ್ತಾನೆ. ನನ್ನ ಸ್ಥಿತಿಯನ್ನು ನೋಡಿ, ನಾನು ಕೂಡ ನಿಮ್ಮ ಜೊತೆ ಆಸ್ಪತ್ರೆಗೆ ಬರುತ್ತಿದ್ದೇನೆ ಎಂದು ಹೇಳಿದನು.  ಒಬ್ಬಂಟಿಯಾಗಿ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ತೈಮೂರ್ ತನ್ನ ಜೊತೆ ಇದ್ದರೆ ತಾನೂ ತನ್ನ ಮಗನನ್ನು ನೋಡಿ ನೋವು ಮರೆಯಬಹುದು ಎಂದು ಭಾವಿಸಿದೇನು. ಕರೀನಾ ಕಪೂರ್ ತನ್ನ ಮಗನನ್ನು ತಂದೆಯೊಂದಿಗೆ ಆಸ್ಪತ್ರೆಗೆ ಕಳುಹಿಸಿದ್ದರು ಎಂದು ಸೈಫ್ ಹೇಳುತ್ತಾರೆ.

ತೈಮೂರ್  ತನ್ನ ತಂದೆಗೆ ತುಂಬಾ ಆಪ್ತ. ಕರೀನಾ ಮತ್ತು ಸೈಫ್ ಅವರ ಹಿರಿಯ ಮಗ ತೈಮೂರ್‌ಗೆ 8 ವರ್ಷ.  ಕರೀನಾ ಕಪೂರ್ ಖಾನ್ ಸಂದರ್ಶನವೊಂದರಲ್ಲಿ ತೈಮೂರ್ ತುಂಬಾ ಬುದ್ಧಿವಂತ ಎಂದು ಈ ಹಿಂದೆಯೇ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net