ನೀವು ಬೋಳು ತಲೆ ಹೊಂದಿದ್ದೀರಾ? ಹಾಗಾದ್ರೆ ಶಫೀಕ್​ ಐಡಿಯಾ ಫಾಲೋ ಮಾಡಿ ಲಕ್ಷ ಲಕ್ಷ ಸಂಪಾದಿಸಿ! Bald Head

Bald Head
Published on

Bald Head : ಬೋಳು ತಲೆಗೆ ಯಾವುದೇ ಚಿಕಿತ್ಸೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಬೋಳು ತಲೆಯನ್ನು ಬಳಸಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು ಎಂಬುದು ನಿಮಗೆ ಗೊತ್ತಿದೆಯಾ? ಹೌದು, ನಾವು ಹೇಳುತ್ತಿರುವುದು ಅಕ್ಷರಶಃ ಸತ್ಯ.

ಕೇರಳದ ಅಂಬಲಪ್ಪುಳದ ಕುಂಬಳಸ್ಸೆರಿಲ್‌ನ ಶೆಫೀಕ್ ಹಾಶಿಮ್ ಎಂಬುವರು ಬೋಳು ತಲೆಯನ್ನು ವಿಡಿಯೋ ಮತ್ತು ಫೋಟೋಗಳಿಗಾಗಿ ಮಾತ್ರವಲ್ಲದೆ ಚಲಿಸುವ ಜಾಹೀರಾತು ಫಲಕಗಳಾಗಿಯೂ ಬಳಸುತ್ತಿದ್ದಾರೆ. ಈ ಮೂಲಕ ಭಾರಿ ಆದಾಯವನ್ನು ಗಳಿಸುತ್ತಿದ್ದಾರೆ.

ಶೆಫೀಕ್​ ಅವರಿಗೆ 30ನೇ ವಯಸ್ಸಿಗೆ ಕೂದಲು ಉದುರುವ ಸಮಸ್ಯೆ ತೀವ್ರವಾಗಿತ್ತು. ಈ ವೇಳೆ ಅವರು ಕೂದಲು ಕಸಿ ಮಾಡಿಸಿಕೊಳ್ಳಲು ಹಲವಾರು ಬಾರಿ ಯೋಚನೆ ಮಾಡಿದ್ದರು. ಏನೇ ಮಾಡಿದರೂ ತಲೆ ಬೋಳಾಗುವುದನ್ನು ಮಾತ್ರ ನಿಲ್ಲಿಸಲು ಸಾಧ್ಯವಾಗಲಿಲ್ಲ. ಪ್ರಯಾಣ ಮತ್ತು ವಿವಿಧ ವ್ಲಾಗ್‌ಗಳು ಸೇರಿದಂತೆ ಯೂಟ್ಯೂಬ್ ವಿಡಿಯೋಗಳನ್ನು ಮಾಡುವ ಶೆಫೀಕ್‌ಗೆ ಈಗ 38 ವರ್ಷ. ಶೆಫೀಕ್ ಅವರು ಪೌಡರ್ ಗಿರಣಿಯ ಉದ್ಯಮಿ ಮತ್ತು ಖಾಸಗಿ ಎಫ್‌ಎಂ ರೇಡಿಯೊದಲ್ಲಿ ಕಾರ್ಯಕ್ರಮದ ನಿರ್ಮಾಪಕರೂ ಆಗಿದ್ದಾರೆ.

ಬೋಳು ತಲೆಯ ಬಗ್ಗೆ ಸದಾ ಚಿಂತಿಸುತ್ತಿದ್ದ ಶಫೀಕ್​, ಅದನ್ನೇ ಆದಾಯದ ಮೂಲವನ್ನಾಗಿ ಏಕೆ ಪರಿವರ್ತಿಸಬಾರದು? ಎಂದು ಆಲೋಚಿಸಿದರು. ಕ್ರಿಕೆಟ್, ಪುಟ್​ಬಾಲ್​ ಮತ್ತು ದೋಣಿ ಸ್ಪರ್ಧೆಯಂತಹ ಕ್ರೀಡೆಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬ್ರಾಂಡ್ ಮಾಡಲು ತಮ್ಮ ತಲೆಯನ್ನು ಬೋಳಿಸಿಕೊಳ್ಳುತ್ತಾರೆ. ಅದೇನೆ ಇರಲಿ ವ್ಯಾಪಾರ ಜಾಹೀರಾತಿಗಾಗಿ ಬೋಳು ತಲೆಯನ್ನು ಬಳಸುವ ಮೊದಲ ವ್ಯಕ್ತಿ ನಾನೇ ಎಂದು ಶಫೀಕ್ ಹೇಳಿಕೊಂಡಿದ್ದಾರೆ.

ವಿವಿಧ ಬ್ರಾಂಡ್‌ಗಳ ಜಾಹೀರಾತುಗಳನ್ನು ಸ್ಟಿಕ್ಕರ್‌ಗಳಾಗಿ ಅಥವಾ ತಾತ್ಕಾಲಿಕ ಹಚ್ಚೆಗಳಾಗಿ ಶಫೀಕ್​ ಅವರ ಬೋಳು ತಲೆಯ ಮೇಲೆ ಅನ್ವಯಿಸಬಹುದು. ಶಫೀಕ್​ ಅವರು ತಮ್ಮ ಯೂಟ್ಯೂಬ್ ವಿಡಿಯೋಗಳಲ್ಲಿ ಜಾಹೀರಾತುಗಳಿಂದ ಅಲಂಕರಿಸಲ್ಪಟ್ಟ ತಮ್ಮ ಬೋಳು ತಲೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ.

ಹಣೆಯಿಂದ ಹಿಡಿದು ಸಂಪೂರ್ಣ ತಲೆಯನ್ನು ಜಾಹೀರಾತುಗಾಗಿ ಬಳಸಬಹುದು. ನೀವು ಬಹಳಷ್ಟು ಪ್ರಯಾಣಿಸುವವರಾಗಿದ್ದರೆ, ಜಾಹೀರಾತು ಕೂಡ ಪ್ರಯಾಣಿಸುತ್ತದೆ. ಚುನಾವಣಾ ಪ್ರಚಾರಕ್ಕೂ ಅವಕಾಶವಿದೆ. ನೀವು ಧ್ವಜಗಳು, ಚಿಹ್ನೆಗಳು ಮತ್ತು ಅಭ್ಯರ್ಥಿಯ ಚಿತ್ರವನ್ನು ತಲೆಯ ಮೇಲೆ ಬಿಡಿಸಿಕೊಂಡು ಓಡಾಡಬಹುದು. ಈ ರೀತಿಯ ವಿಭಿನ್ನ ಆಲೋಚನೆಯೊಂದಿಗೆ ಶಫೀಕ್​ ಅವರು ಸಾವಿರಾರು ರೂಪಾಯಿ ಹಣವನ್ನು ಸಂಪಾದಿಸುತ್ತಿದ್ದಾರೆ.

ಶಫೀಕ್ ಅವರ ಈ ವಿನೂತನ ಐಡಿಯಾ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net