ಆರ್ಕಿಟೆಕ್ಚರ್ ಕೋರ್ಸ್: ಅರ್ಹತಾ ಅಂಕ ಶೇ 45ಕ್ಕೆ ಇಳಿಕೆ

kea
Published on

ಬೆಂಗಳೂರು ಆರ್ಕಿಟೆಕ್ಚರ್ ಕೋರ್ಸ್‌ಗೆ ಎರಡನೇ ಪಿಯುಸಿಯ ಅರ್ಹತಾ ಅಂಕಗಳನ್ನು ಶೇ 50ರಿಂದ ಶೇ 45ರಷ್ಟು ಅಂಕಗಳಿಗೆ ಇಳಿಸಿರುವ ಕಾರಣ ಆ ಕೋರ್ಸ್‌ಗೆ ಸೇರಬಯಸುವ ಅರ್ಹರಿಗೆ ಯುಜಿಸಿಇಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇದೇ 13ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.

ಕೌನ್ಸಿಲ್ ಆ್ ಆರ್ಕಿಟೆಕ್ಚರ್, ಇತ್ತೀಚೆಗೆ ಪತ್ರ ಬರೆದು ಅರ್ಹತಾ ಅಂಕಗಳನ್ನು ಕಡಿಮೆ ಮಾಡಿದ್ದು ಆ ಕಾರಣಕ್ಕೆ ದ್ವಿತೀಯ ಪಿಯುಸಿಯಲ್ಲಿ ಶೇ.45ರಷ್ಟು ಅಂಕ ಪಡೆದು, ನಾಟಾ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಅರ್ಜಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜು.15ರೊಳಗೆ ನಾಟಾ ಅಂಕಗಳ ವಿವರ ಮತ್ತು ಅರ್ಜಿ ಪ್ರತಿಯನ್ನು ಕೆಇಎಗೆ ಸಲ್ಲಿಸಬೇಕು. ಜುಲೈ 8ರೊಳಗೆ ನಾಟಾ ಅರ್ಹತೆ ಪಡೆದವರು ಕೂಡ ಈ ದಿನಾಂಕದೊಳಗೆ ಅಂಕಗಳ ಮಾಹಿತಿಯನ್ನು ನೀಡಬೇಕು ಎಂದು ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net