ಅರ್ಚನಂ ಭಕ್ತಿ

6-67f01bace31eb
Published on
ಭಗವಂತನಿಗೆ ಪೂಜೆ, ಅರ್ಚನೆ ಇತ್ಯಾದಿ ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುವುದಕ್ಕೆ ಅರ್ಚನ ಭಕ್ತಿ ಎನ್ನುತ್ತಾರೆ. ಭಗವಂತನನ್ನು ವಿವಿಧ ರೀತಿಯ ಪೂಜಾದ್ರವ್ಯಗಳಿಂದ ಪೂಜಿಸುವುದು ಭಕ್ತಿಯ ಪ್ರಕಾರದಲ್ಲಿ ಬರುತ್ತದೆ.

ಬೆಳಗಿನ ಸುಪ್ರಭಾತ ಸೇವೆ, ನೈವೇದ್ಯ, ಅಭಿಷೇಕ, ನೀರಾಜನ, ಅಲಂಕಾರ, ಛತ್ರ-ಚಾಮರ ಸೇವೆ, ಶಯನೋತ್ಸವ ಸೇವೆ ಇದರ ಭಾಗವಾಗಿದೆ. ‘ಚೇತುಲಾರ ಶೃಂಗಾರಮು ಚೇಥಸಿ’ ಎಂಬ ಕೀರ್ತನೆಯಲ್ಲಿ ಶ್ರೀರಾಮ ಬ್ರಹ್ಮಾದಿಗಳು ಆಶ್ಚರ್ಯಪಡುವಂತೆ ನಿನಗೆ ಅಲಂಕಾರ ಮಾಡಿ ಆನಂದ ಪಡುತ್ತೇನೆ ಎಂದು ತ್ಯಾಗರಾಜರು ತಮ್ಮ ಕೀರ್ತನೆಗಳಲ್ಲಿ ಅರ್ಚನ ಭಕ್ತಿಯ ಬಗ್ಗೆ ತಿಳಿಸುತ್ತಾರೆ.

ಸುವರ್ಣಮಯವಾದ ಬಟ್ಟೆಯನ್ನು ಉಡಿಸಿ, ಬಂಗಾರದ ಒಡವೆಗಳನ್ನು ತೊಡಿಸಿ, ಪಾರಿಜಾತ ಹೂವುಗಳಿಂದ ಅಲಂಕರಿಸಿ, ಬಂಗಾರದ ಒಡ್ಯಾಣ, ಪದಕ, ಮುತ್ತಿನ ಹಾರಗಳನ್ನು ಸುತ್ತಿ, ಗಂಧವನ್ನು ಹಚ್ಚಿ ಆನಂದಿಸುವುದಾಗಿ ಹಾಡುತ್ತಾರೆ. 6. ವಂದನಂ ಭಕ್ತಿ: ಕಾಯಾ, ವಾಚಾ, ಮನಸಾ ನೀನೇ ನನಗೆ ದಿಕ್ಕು.

ನೀನೇ ನನ್ನ ಬಂಧು-ಬಳಗ, ತಂದೆ-ತಾಯಿ, ಸಖ ಎಂಬ ಭಾವನೆಯಿಂದ ಸಂಪೂರ್ಣವಾಗಿ ಭಗವಂತನಲ್ಲಿ ಶರಣಾಗಿ, ನಮಸ್ಕರಿಸುವುದಕ್ಕೆ ವಂದನೆ ಭಕ್ತಿ ಎನ್ನುತ್ತಾರೆ. ‘ನಮೋಸ್ತುತೇ ದೇವವರ ಪ್ರಸೀದ’ (ನಿನಗೆ ನನ್ನ ನಮಸ್ಕಾರ) ಎಂದು ಅರ್ಜುನನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದನ್ನು ನಾವು ಭಗವದ್ಗೀತೆಯ 11ನೇ ಅಧ್ಯಾಯದ ವಿಶ್ವರೂಪದರ್ಶನ ಯೋಗದಲ್ಲಿ ಕಾಣುತ್ತೇವೆ.

ಅದೇ ಅಧ್ಯಾಯದಲ್ಲಿ ಮುಂದೆ, ನಮಃ ಪುರಸ್ತಾದಥ ಪೃಷ್ಠತಸ್ತೇ| ನಮೊà—ಸ್ತು ತೇ ಸರ್ವತ ಏವ ಸರ್ವೆ || (ಗೀತೆ 11.40) -ಹೇ ದೇವದೇವೇಶ, ನಿನಗೆ ಮುಂದೆ, ಹಿಂದೆ, ಎಲ್ಲಾ ಕಡೆಯಿಂದಲೂ ನನ್ನ ನಮಸ್ಕಾರಗಳು. ಅನಂತ ವೀರ್ಯನೆ, ನೀನು ಅಮಿತ ಪರಾಕ್ರಮನು. ನೀನು ಎಲ್ಲವನ್ನೂ ವ್ಯಾಪಿಸಿಕೊಂಡಿರುವುದರಿಂದ ಸರ್ವಸ್ವರೂಪನಾಗಿರುವೆ ಎಂದು ಅರ್ಜುನನು ಕೃಷ್ಣನಿಗೆ ಪುನಃ ಪುನಃ ನಮಸ್ಕರಿಸುತ್ತಾನೆ. ಈ ಪ್ರಾಕೃತ ದೇಹವನ್ನಿತ್ತ ಅಪ್ರಾಕೃತ ಪರಮಾತ್ಮನ ದಿವ್ಯಮಂಗಳ ವಿಗ್ರಹವನ್ನು ನಮಿಸುವವರೇ, ವಂದಿಸುವವರೇ ಧನ್ಯರು ಎಂದು ಭಕ್ತಿಶಾಸ್ತ ಗ್ರಂಥಗಳು ತಿಳಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net