ಪುತ್ರಿ ವಿವಾಹದ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಮ್ಯೂಸಿಕ್​ ಮಾಂತ್ರಿಕ ಎ.ಆರ್​.ರೆಹಮಾನ್​

Rehmaan new
Published on

ಮುಂಬೈ: ಮ್ಯೂಸಿಕ್​ ಮಾಂತ್ರಿಕ ಎ.ಆರ್​. ರೆಹಮಾನ್​ ಅವರು ಸದ್ಯ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣವೂ ಇದೆ.

ರೆಹಮಾನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಪುತ್ರಿ ಖತಿಜಾ ರೆಹಮಾನ್​ ಅವರ ವಿವಾಹ ನಡೆದಿದ್ದು, ಮಗಳ ಮದುವೆಯ ಫೋಟೋ ಹಂಚಿಕೊಂಡು ನವದಂಪತಿಗೆ ಶುಭಕೋರಿದ್ದಾರೆ.

ರಿಯಾಸುದ್ದೀನ್​ ಶೇಖ್​ ಮೊಹಮ್ಮದ್​ ಅವರನ್ನು ಖತೀಜಾ ವರಿಸಿದ್ದಾರೆ. ನವ ವಧು-ವರರೊಂದಿಗೆ ಕುಟುಂಬ ಸಮೇತ ತೆಗಿದಿರುವ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಕೆಯ ಮಹಾಪೂರವೇ ಹರಿದುಬರುತ್ತಿದೆ.

ಹೆಚ್ಚಾಗಿ ರೆಹಮಾನ್​ ಅವರ ತಾಯಿಯ ಭಾವಚಿತ್ರವಿರುವ ಫೋಟೋದೊಂದಿಗೆ ಕುಟುಂಬಸ್ಥರು ಇರುವ ಈ ಚಿತ್ರಕ್ಕೆ ರೆಹಮಾನ್​ ಅವರಿಗೆ ತಾಯಿ ಮೇಲಿನ ಪ್ರೀತಿಯನ್ನು ತೋರಿಸಿಕೊಡುತ್ತದೆ.ಇದು ಅಭಿಮಾನಿಗಳಲ್ಲಿ ಮತ್ತಷ್ಟು ಮೆಚ್ಚುಗೆಗೆ ಕಾರಣವಾಗಿದೆ.

ಕಳೆದ ಡಿಸೆಂಬರ್​ನಲ್ಲಿ ಗಾಯಕರಾಗಿರುವ ರಯಸುದ್ದೀನ್​ ಹಾಗೂ ಖತೀಜಾ ಅವರ ನಿಶ್ಚಿತಾರ್ಥ ನಡೆದಿತ್ತು. ಎ.ಆರ್​.ರೆಹಮಾನ್​, ಪತ್ನಿ ಸೈರಾ ಬಾನು, ಹಿರಿಯ ಪುತ್ರಿ ರಹೀಮಾ ಮತ್ತು ಪುತ್ರ ಅಮೀನ್​ ಇರುವ ಚಿತ್ರವನ್ನು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net