ಖಳನಟನ ಜೊತೆ 'ಆಪ್ತರಕ್ಷಕ' ನಟಿ ಲವ್ವಿ-ಡವ್ವಿ; ರೊಮ್ಯಾಂಟಿಕ್ ಫೋಟೊಗಳು ವೈರಲ್..

vimala-vinay
Published on

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಆಪ್ತರಕ್ಷಕ’ ಚಿತ್ರದಲ್ಲಿ ನಾಗವಲ್ಲಿ ಪಾತ್ರದಲ್ಲಿ ನಟಿಸಿದ್ದ ವಿಮಲಾ ರಾಮನ್ ಇತ್ತೀಚೆಗೆ ಖಳನಟ ವಿನಯ್ ರೈ ಜೊತೆಗೆ ಇರುವ ರೊಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರಾ? ಅಥವಾ ಒಟ್ಟಿಗೆ ಜೀವಿಸುತ್ತಿದ್ದಾರಾ ಎಂದು ನೆಟ್ಟಿಗರಲ್ಲಿ ಚರ್ಚೆ ಶುರುವಾಗಿದೆ.

‘ಹನುಮಾನ್’ ಚಿತ್ರದ ವಿಲನ್ ವಿನಯ್ ರೈ ಜೊತೆ ವಿಮಲಾ ತುಂಬಾ ಕ್ಲೋಸ್‌ ಆಗಿರುವ ಫೋಟೋಗಳನ್ನು ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿದ್ದರು. ಇದೀಗ ಮತ್ತೆ ರೊಮ್ಯಾಂಟಿಕ್ ಆಗಿರುವ ಫೋಟೋಗಳನ್ನು ಶೇರ್ ಮಾಡುವ ಮೂಲಕ ಈ ತಾರಾ ಜೋಡಿ ಸುದ್ದಿಯಲ್ಲಿದೆ.

ಆಸ್ಟ್ರೇಲಿಯಾ ಮೂಲದ ವಿಮಲಾ ರಾಮನ್ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಆಕೆಗೆ ದೊಡ್ಡ ಬ್ರೇಕ್ ಸಿಗಲಿಲ್ಲ. ವಯಸ್ಸು 40 ದಾಟಿದರೂ ಮದುವೆ ಬಗ್ಗೆ ಮೌನವಾಗಿಯೇ ಇದ್ದ ಆಕೆ ಇದೀಗ ನಟ ವಿನಯ್ ರೈ ಜೊತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಮುಂಬೈನಲ್ಲಿ ತುಳು ಕುಟುಂಬದಲ್ಲಿ ಹುಟ್ಟಿ ಬೆಳೆದ ವಿನಯ್ ರೈ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಒಂದಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ ವಿನಯ್ ರೈ ಇತ್ತೀಚೆಗೆ ಖಳನಟನಾಗಿಯೂ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಇತ್ತೀಚೆಗೆ ಸೂಪರ್ ಹಿಟ್ ಆದ 'ಹನುಮಾನ್' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ತೆಲುಗಿನ 'ಗಾಂಡೀವಧಾರಿ ಅರ್ಜುನ' ಚಿತ್ರದಲ್ಲಿ ವಿನಯ್ ಮತ್ತು ವಿಮಲಾ ಪತಿ-ಪತ್ನಿಯಾಗಿ ನಟಿಸಿದ್ದರು. ಕನ್ನಡದಲ್ಲಿ 'ಆಪ್ತರಕ್ಷಕ' ಚಿತ್ರದಲ್ಲಿ ನಾಗವಲ್ಲಿ ಆಗಿ ವಿಮಲಾ ರಾಮನ್ ಮಿಂಚಿದ್ದರು. ರಾಜರಾಜೇಂದ್ರ ಎನ್ನುವ ಮತ್ತೊಂದು ಚಿತ್ರದಲ್ಲಿ ಕೂಡ ನಟಿಸಿದ್ದರು. ಸದ್ಯ ರೆಸಾರ್ಟ್‌ವೊಂದರಲ್ಲಿ ವಿಮಲಾ-ವಿನಯ್ ಮಾಡಿಸಿರುವ ರೊಮ್ಯಾಂಟಿಕ್ ಫೋಟೊಶೂಟ್ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net