

ಶಿವಮೊಗ್ಗ: ಜಿಲ್ಲೆಯಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆಗೆ ಪೊಲೀಸ್ ಬಂದೋಬಸ್ತ್ ಒದಗಿಸಿ ಶಾಂತಿಯುತ ಉತ್ಸವ ನಡೆಯಲು ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕರ ವೇದಿಕೆ ರಾಜ್ಯಾಧ್ಯ ಎಚ್.ಎಂ.ಚಂದ್ರಶೇಖರಪ್ಪ ಹೇಳಿದರು.
ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೋಮವಾರ ಮಿಥುನ್ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತ್ತೀಚಿಗೆ ಯಾವುದೇ ಹಬ್ಬಗಳು ನಡೆದರೂ ಸೌಹಾರ್ದದ ಕೊರತೆ ಕಾಣುತ್ತಿತ್ತು. ಈ ಬಾರಿ ಹಬ್ಬದಲ್ಲಿ ಯಾವುದೇ ಅಹಿತಕರ ಟನೆ ನಡೆದಿಲ್ಲ. ಇದಕ್ಕೆ ಪೊಲೀಸರ ಮುಂಜಾಗ್ರತೆಯೇ ಕಾರಣ ಎಂದರು.
ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ನಾಗರಿಕ ಹಿತರಣಾ ವೇದಿಕೆಗಳ ಒಕ್ಕೂಟದ ಸಂಟನಾ ಕಾರ್ಯದರ್ಶಿ ಅಶೋಕ್ಕುಮಾರ್, ರೈಸ್ ಮಿಲ್ ಮಾಲೀಕರ ಸಂದ ಶಿವಣ್ಣ, ಕಾಂಗ್ರೆಸ್ ಪ್ರಮುಖರಾದ ಎಸ್.ಜೆ.ಶ್ರೀನಿವಾಸ್, ಮಹಮದ್ ಇಕ್ಬಾಲ್ ನೇತಾಜಿ, ಅನ್ವರ್ ಖುರೇಶಿ, ಷಡಾಕ್ಷರಿ ಇತರರಿದ್ದರು.