ಕರ್ನಾಟಕದ ಜಸ್ಟೀಸ್‌ಗಳನ್ನು ಸಿಜೆಗಳಾಗಿ ನೇಮಿಸಿ: ಸಿಜೆಐಗೆ ಬಿಎಲ್‌ಎ ಮಾಜಿ ಅಧ್ಯಕ್ಷ ಪತ್ರ

highcourt
Published on

ಬೆಂಗಳೂರು: ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ದೇಶದ ಇತರೆ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಬೇಕು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಬೆಂಗಳೂರು ವಕೀಲರ ಸಂಘದ (ಬಿಎಲ್‌ಎ) ಮಾಜಿ ಅಧ್ಯ ಕ್ಷ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಮನವಿ ಮಾಡಿದ್ದಾರೆ.

ಕರ್ನಾಟಕ ಹೈಕೋರ್ಟ್ ಹಲವು ವರ್ಷಗಳಿಂದ ಸಮರ್ಥ ಮತ್ತು ಅನುಭವಿ ಜಡ್ಜ್‌ಗಳನ್ನು ಕಂಡಿದೆ. ವೃತ್ತಿ ಬದುಕಿನಲ್ಲಿ ಕಾನೂನು ಚಾತುರ್ಯ, ನ್ಯಾಯಾಂಗ ಮನೋಧರ್ಮ ಮತ್ತು ಸಂವಿಧಾನವನ್ನು ಎತ್ತಿಹಿಡಿಯುವ ಬದ್ಧತೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೂ ಇತ್ತೀಚಿನ ವರ್ಷಗಳಲ್ಲಿ ದೇಶದ ಇತರ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಕರ್ನಾಟಕದ ನ್ಯಾಯಮೂರ್ತಿಗಳನ್ನು ಕಡೆಗಣಿಸಲಾಗುತ್ತಿದೆ. ಈ ಪ್ರವೃತ್ತಿ ಒಪ್ಪುವಂತದಲ್ಲ ಎಂದು ಪತ್ರ ಮುಖೇನ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net