ನಾಯಿಗಾಗಿ ವಾಸಸ್ಥಳ ಪ್ರಮಾಣಪತ್ರ ಅರ್ಜಿ ಸಲ್ಲಿಕೆ: ಮತ್ತೊಂದು ಪ್ರಕರಣ ಬೆಳಕಿಗೆ! | Dog

Untitled design (100)
Published on

Dog: ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ವಿವಾದದ ಮಧ್ಯೆ ಪಟ್ನಾ ಜಿಲ್ಲೆಯಲ್ಲಿ ಶ್ವಾನ(ನಾಯಿ) ಹೆಸರಲ್ಲಿ ವಾಸಸ್ಥಳ ಪ್ರಮಾಣ ಪತ್ರ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಕೆಲ ದಿನಗಳಲ್ಲೇ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ, ಈ ಕುರಿತ ಪೋಸ್ಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಾಯಿ ಫೋಟೋ ಇರುವ 'ಡಾಗೇಶ್​ ಬಾಬು' ಹೆಸರಿನ ಅರ್ಜಿ ನವಾಡಾ ಜಿಲ್ಲಾಡಳಿತದ ಕಂದಾಯ ಇಲಾಖೆಗೆ ಸಲ್ಲಿಕೆಯಾಗಿದೆ. ಅಲ್ಲದೆ, ತಂದೆ ಡಾಗೇಶ್​ ಬಾಬು, ತಾಯಿ ಡಾಗೇಶ್​ ಮಮ್ಮಿ ಎಂದು ಹೆಸರಿಸಲಾಗಿದೆ. ಅರ್ಜಿದಾರ ವಿಳಾಸ ಸಿರ್ದುಲ ಪ್ರದೇಶದ ವಾರ್ಡ್​ ಸಂಖ್ಯೆ 11, ಖರೋಂದ್​ ಗ್ರಾಮ ಎಂದು ನಮೂದಿಸಲಾಗಿದೆ.

ಇನ್ನು ಕುರಿತು ನವಾಡಾ ಜಿಲ್ಲಾ ಮಾಜಿಸ್ಟ್ರೇಟ್​ ರವಿಪ್ರಕಾಶ್​ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಫ್​ಐಆರ್​ ದಾಖಲಿಸಲು ಸೂಚಿದ್ದಾರೆ.

ತನಿಖೆ ಆರಂಭಿಸಿದ ಜಿಲ್ಲಾಡಳಿತ ಇನ್ನು ಈ ಪ್ರಕರಣ ವೈರಲ್​ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ನವಾಡಾ ಜಿಲ್ಲಾಡಳಿತ ಡಾಗೇಶ್​​ ಬಾಬು ಹೆಸರಿನಲ್ಲಿ ನೀಡಲಾದ ಪ್ರಮಾಣ ಪತ್ರವನ್ನು ರದ್ದು ಮಾಡಿದೆ.ಅಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಅರ್ಜಿದಾರ, ಕಂಪ್ಯೂಟರ್​ ಆಪರೇಟರ್​ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net