

ಬೆಂಗಳೂರು: ಯುವಜನರಿಗೆ ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಲು ಉತ್ತಮ ಅವಕಾಶ ಒದಗಿಬಂದಿದೆ. ಸೇನೆಯಲ್ಲಿ ಜೂನಿಯರ್ ಕಮಿಶನ್ಡ್ ಅಧಿಕಾರಿ ಮತ್ತು ಕಮಿಶನ್ಡ್ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ವಾರ್ತಾ ಇಲಾಖೆ ವಿವರಗಳನ್ನು ಪ್ರಕಟಿಸಿದೆ.
ಹದಿನೇಳೂವರೆ ವರ್ಷದಿಂದ 23 ವರ್ಷ ವಯೋಮಾನದವರಿಗೆ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ -
1) 12ನೇ ತರಗತಿ ಅಥವಾ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್ ವಿಷಯದ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಒಟ್ಟು ಶೇ.50 ಮತ್ತು ಪ್ರತಿ ವಿಷಯದಲ್ಲಿ ಶೇ.40 ಅಂಕ ಗಳಿಸಿ ಉತ್ತೀರ್ಣರಾಗಿರುವವರು ಸೋಲ್ಜರ್ ಟೆಕ್ ಎನ್ ಎ(ಎಎಂಸಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
2) 12ನೇ ತರಗತಿ ಅಥವಾ ವಾಣಿಜ್ಯ ಅಥವಾ ವಿಜ್ಞಾನ ವಿಷಯದಲ್ಲಿ ಒಟ್ಟು ಶೇ.60 ಅಂಕ ಗಳಿಸಿ ಮತ್ತು ಪ್ರತಿ ವಿಷಯದಲ್ಲಿ ಶೇ.50 ಅಂಕ ಗಳಿಸಿ ಉತ್ತೀರ್ಣರಾಗಿರುವವರು ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹತ್ತೊಂಭತ್ತರಿಂದ 25 ವರ್ಷ ವಯೋಮಾನದವರು - 12 ನೇ ತರಗತಿ ಅಥವಾ ಡಿ.ಫಾರ್ಮದಲ್ಲಿ ಶೇ.55 ಅಂಕದೊಂದಿಗೆ ಉತ್ತೀರ್ಣರಾಗಿದ್ದು ರಾಜ್ಯ ಫಾರ್ಮಸಿ ಕೌನ್ಸಿಲ್ನಲ್ಲಿ ನೋಂದಣಿ ಪಡೆದಿದ್ದಲ್ಲಿ, ಅಥವಾ ಶೇ.50 ಅಂಕಗಳೊಂದಿಗೆ ಬಿ.ಫಾರ್ಮದಲ್ಲಿ ಉತ್ತೀರ್ಣರಾಗಿದ್ದಲ್ಲಿ ಸಿಪಾಯಿ ಫಾರ್ಮ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ www.joinindianarmy.nic.in ಲಿಂಕ್ಅನ್ನು ಕ್ಲಿಕ್ಕಿಸಿ.