ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

Published on

ಸೋಮವಾರಪೇಟೆ: ಸಂಬಾರ ಮಂಡಳಿ ಸೋಮವಾರಪೇಟೆ ವತಿಯಿಂದ ಏಲಕ್ಕಿ ತೋಟದ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ವಿವಿಧ ಯೋಜನೆಗಳ ಸಹಾಯ ಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕ್ಷೇತ್ರಾಧಿಕಾರಿ ಎನ್.ಬಿ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಲಕ್ಕಿ ಮರುನಾಟಿ ಯೋಜನೆ, ಏಲಕ್ಕಿ ನರ್ಸರಿ ಯೋಜನೆ, ಕಾಳು ಮೆಣಸು ಬಿಡಿಸುವ ಯಂತ್ರ ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು. ಸೆ.30 ಕೊನೆ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿ ಕಚೇರಿಯನ್ನು ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net