ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೀಡಾ ಪ್ರತಿಭಾವಂತರಿಗೆ ಜನರಲ್ ಬ್ಯಾಂಕಿಂಗ್ ಆಫೀಸರ್ ಆಗುವ ಅವಕಾಶ

BOI
Published on

ಮುಂಬೈ : ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್​ ಮತ್ತು ಜನರಲ್ ಬ್ಯಾಂಕಿಂಗ್ ಆಫೀಸರ್ (ಜೆಎಂಜಿಸ್ಕೇಲ್-1) ಹುದ್ದೆಗಳಿಗೆ ಕ್ರೀಡಾ ಪ್ರತಿಭಾವಂತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಕ್ರೀಡಾ ವಿಭಾಗಗಳು: ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಜಿಮ್ನಾಸ್ಟಿಕ್ಸ್, ಸ್ವಿಮ್ಮಿಂಗ್, ಟೇಬಲ್ ಟೆನ್ನಿಸ್, ವೇಯ್ಟ್ ಲಿಫ್ಟಿಂಗ್, ರೆಸ್ಲಿಂಗ್ ಕ್ರೀಡೆಗಳಲ್ಲಿ ಆಫೀಸರ್ ಹಾಗೂ ಕ್ಲರ್ಕ್​ತಲಾ 14-14 ಹುದ್ದೆಗಳು ಖಾಲಿ ಇವೆ.

ಜೆಎಂಜಿ ಸ್ಕೇಲ್ -1 ಹುದ್ದೆಗಳ ಅಭ್ಯರ್ಥಿಗಳಿಗೆ 23700/- ರೂ. ರಿಂದ 42020 /- ರೂ. ಹಾಗೂ ಕ್ಲರ್ಕ್​ ಹುದ್ದೆಯ ಅಭ್ಯರ್ಥಿಗಳಿಗೆ 11765/- ರೂ. ದಿಂದ 31540/- ರೂ. ವೇತನ ಇರುತ್ತದೆ.

ವಿದ್ಯಾರ್ಹತೆ, ವಯೋಮಿತಿ ಇತ್ಯಾದಿ ವಿವರಗಳಿಗೆ ಅಧಿಸೂಚನೆ ನೋಡಬಹುದು. ಆನ್​ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 16 ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ https://bankofindia.co.in ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net