ರಿಯಾ ಭೇಟಿಗೂ ಮುನ್ನ ಹೇಗಿದ್ದ ಸುಶಾಂತ್​; ಹಿಪ್ನೋಟೈಸ್​ ಮಾಡಿದ್ದಳೇ ಗೆಳತಿ; ಜತೆಗಿದ್ದವರು ಹೇಳಿದ್ದೇನು?

Kangana - Sushant
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ವಿಚಾರಣೆ ಆರಂಭಿಸಿದ ದಿನದಿಂದ ಪ್ರಕರಣಕ್ಕೆ ಹಲವು ರೋಚಕ ತಿರುವುಗಳು ಸಿಗುತ್ತಲೇ ಇವೆ.

ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸುಶಾಂತ್​ ತಂದೆ ಕೆ.ಕೆ. ಸಿಂಗ್​ ಪ್ರಕರಣ ದಾಖಲಿಸುತ್ತಿದ್ದಂತೆ ಆಕೆಯ ವಿರುದ್ಧ ಹಲವರು ಮಾತನಾಡುತ್ತಿದ್ದಾರೆ. ಸುಶಾಂತ್​ನ ಹಲವು ಗೆಳೆಯರು ರಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಶಾಂತ್​ ಜತೆಗಿದ್ದುಕೊಂಡು ಮೂರು ವರ್ಷ ಕೆಲಸ ಮಾಡಿದ್ದ ಅಂಕಿತ್​ ಆಚಾರ್ಯ ಕೂಡ ರಿಯಾ ಬಗ್ಗೆ ಹಲವು ಮಾಹಿತಿಯನ್ನು ಹೊರ ಹಾಕಿದ್ದಾನೆ. ಮೊದಲೆಲ್ಲ ನನ್ನನ್ನು ಬಿಗಿದಪ್ಪಿ ಮಾತನಾಡಿಸುತ್ತಿದ್ದ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಸುಶಾಂತ್​ ನಡವಳಿಕೆ ರಿಯಾಳ ಆಗಮನದಿಂದ ಭಾರಿ ಬದಲಾವಣೆಯಾಗಿತ್ತು ಎಂದು ಹೇಳಿದ್ದಾನೆ.

ಮೊದಲೆಲ್ಲ ಎದ್ದಾಗ ಚಂದ್ರನ ಬಗ್ಗೆ ಮಾತನಾಡುತ್ತಿದ್ದ, ಸ್ನೇಹಿತರ ಭೇಟಿಗಾಗಿ ಹೋಗುತ್ತಿದ್ದ. ಅವರೊಂದಿಗೆ ಪಾರ್ಟಿ ಮಾಡುತ್ತಿದ್ದ. ವರ್ಚುವಲ್​ ರಿಯಾಲಿಟಿ ಗೇಮ್​ ಆರಂಭಿಸುವ ಕನಸು ಹೊಂದಿದ್ದ. ಕೃಷಿಯಲ್ಲಿ ಆಸಕ್ತಿ ಹೊಂದಿ ಫಾರ್ಮ್​ಹೌಸ್​ ಮಾಡಿಕೊಂಡಿದ್ದ.

ಆರಂಭದಲ್ಲಿ ರಿಯಾಳ ಜತೆ ಸುಶಾಂತ್​ಗೆ ಅಂಥ ಬಾಂಧವ್ಯ ಇರಲಿಲ್ಲ. ಬಳಿಕ ಆಕೆ ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡಳು. ಆತನೆಷ್ಟು ತಿನ್ನಬೇಕು. ಯಾವಾಗ ತಿನ್ನಬೇಕು ಎಂಬುದನ್ನು ರಿಯಾ ನಿರ್ಧರಿಸುತ್ತಿದ್ದಳು ಎಂದು ಅಂಕಿತ್​ ಹೇಳಿದ್ದಾನೆ.

ಸಿಬ್ಬಂದಿ ಪೈಕಿ ಅಶೋಕ್​ ಮತ್ತು ನಾನು ಸುಶಾಂತ್​ಗೆ ಆತ್ಮೀಯರಾಗಿದ್ದೇವು. ಅಶೋಕ್​ನನ್ನು ಕೆಲಸದಿಂದ ತೆಗೆದಿದ್ದು ರಿಯಾ. ಏಕೆಂದರೆ ಎಲ್ಲವನ್ನೂ ಅವಳು ನೋಡಿಕೊಳ್ಳುತ್ತಿದ್ದಳು. ಆಕೆ ಸುಶಾಂತ್​ ಮೇಲೆ ಸಮ್ಮೋಹನದಂತೆ (ಹಿಪ್ನೋಟೈಸ್​​) ಆವರಿಸಿಕೊಂಡಿದ್ದಳು ಎಂದು ತಿಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net