

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊಜೆಕ್ಟ್ ಫೆಲೋ ಐದು ಸ್ಥಾನಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಎಂಎಸ್ಸಿ - ಕೆಮಿಸ್ಟ್ರಿ / ಬಯೋ ಕೆಮಿಸ್ಟ್ರಿ / ಬಯೋ ಟೆಕ್ನಾಲಜಿ/ ಫಿಸಿಕ್ಸ್/ ಮಟೀರಿಯಲ್ ಸೈನ್ಸ್ ಪೂರೈಸಿರಬೇಕು.
ಸಂಚಿತ ವೇತನ 15 ಸಾವಿರ ರೂ. ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಬಯೋ ಡೇಟಾ, ಪ್ರಮಾಣಪತ್ರಗಳು, ದಾಖಲಾತಿಗಳ ಹಾರ್ಡ್ ಕಾಪಿಯನ್ನು ಆಗಸ್ಟ್ 12 ರೊಳಗಾಗಿ ಕಳುಹಿಸಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ ಹಾಗೂ ಇನ್ನಿತರ ಅಗತ್ಯ ಮಾಹಿತಿಗೆ www.uni-mysore,ac.in ಸಂಪರ್ಕಿಸಬಹುದು.