ಯುಎಎಸ್-ಬಿಯಿಂದ ಕೃಷಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

gkvk
Published on

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಯುಎಎಸ್-ಬಿ) ಹಳೇ ವಿದ್ಯಾರ್ಥಿಗಳ ಸಂಘವು ಕೃಷಿ ಸಂಬಂಧಿತ ಏಳು ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.


ಕರ್ನಾಟಕ ಬ್ಯಾಂಕ್ ಉತ್ತಮ ಬ್ಯಾಂಕಿಂಗ್ ಕೃಷಿಕ ಪ್ರಶಸ್ತಿ, ಎಸ್.ಎಂ.ನಾರಾಯಣರೆಡ್ಡಿ ಅತ್ಯುತ್ತಮ ಕೃಷಿ ವಿಜ್ಞಾನ ಪದವೀಧರ ರೈತ ಪ್ರಶಸ್ತಿ, ಗಿರಿಯಪ್ಪಗೌಡ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ, ಡಾ. ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಡಾ. ಬಿ.ಕೆ.ಕುಮಾರಸ್ವಾಮಿ ‘ಪ್ರಸಿದ್ಧ’ ಪ್ರಶಸ್ತಿ, ಸಕಲವಾರ ರಾಮಯ್ಯರೆಡ್ಡಿ ದತ್ತಿ ಅತ್ಯುತ್ತಮ ರೈತ ಪ್ರಶಸ್ತಿ ಹಾಗೂ ‘ಅಲುಮ್ನಿ ಅಸೋಸಿಯೇಷನ್ ಕೃಷಿ ಮಾಧ್ಯಮ ಮಿತ್ರ ಪ್ರಶಸ್ತಿ’ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಹಳೇ ವಿದ್ಯಾರ್ಥಿಗಳ ಸಂಘ, ಕೃಷಿ ವಿಶ್ವವಿದ್ಯಾಲಯ, ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ, ಬೆಂಗಳೂರು-560024 ಈ ವಿಳಾಸಕ್ಕೆ ಸೆ.30ರೊಳಗೆ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ ದೂ: 080-23410754 ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net