ಒತ್ತುವರಿ ರಸ್ತೆ ತೆರವುಗೊಳಿಸಲು ಪೊಲೀಸರಿಗೆ ಮನವಿ

manavi
ವೀರಭದ್ರ ಟಾಕೀಸ್ ಮುಂಭಾಗ ಫುಟ್‌ಪಾತ್ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ಮಲೆನಾಡು ಕೇಸರಿ ಪಡೆಯ ಕೋಟೆ ರಾಜು, ಜನಾರ್ದನ, ಅಂಕುಶ್, ಗುರು ವಿ.ಶೇಟ್, ವಿಜಯಕುಮಾರ್ ಮತ್ತಿತರರರು ಸಂತೋಷ್ ಕುಮಾರ್‌ಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ನಗರದ ವಿಶ್ವೇಶ್ವರಯ್ಯ ರಸ್ತೆಯ (ವೀರಭದ್ರ ಟಾಕೀಸ್ ಮುಂಭಾಗ)ಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಕೂಡಲೇ ಮಾರ್ಗ ತೆರವು ಮಾಡಬೇಕೆಂದು ಒತ್ತಾಯಿಸಿ ಮಲೆನಾಡು ಕೇಸರಿ ಪಡೆ ಪ್ರಮುಖರು ಪೂರ್ವ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಮುಸ್ಲಿಂ ಹಾಸ್ಟೆಲ್ ಕಾಂಪ್ಲೆಕ್ಸ್‌ನಲ್ಲಿರುವ ದ್ವಿಚಕ್ರ ವಾಹನ ಗ್ಯಾರೇಜ್‌ನವರು ಪಾದಚಾರಿ ಮಾರ್ಗ ಮತ್ತು ರಸ್ತೆಯ ಅಂಚಿನಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಈ ಗ್ಯಾರೇಜ್ ಪಕ್ಕದಲ್ಲಿರುವ ಅಂಗಡಿಯವರು ಫುಟ್‌ಪಾತ್ ಮೇಲೆ ಫರ್ನೀಚರ್‌ಗಳನ್ನು ಇಡುವುದರಿಂದ ಜನರಿಗೆ ತೊಂದರೆಯಾಗಿದೆ ಎಂದು ದೂರಿದರು.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸಬೇಕು. ಆದರೆ ಫುಟ್‌ಪಾತ್‌ನಲ್ಲಿ ಸಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ವಾಹನ ದಟ್ಟಣೆಯಿಂದ ಇಲ್ಲಿ ಅಪಘಾತ ಸಾಧ್ಯತೆಯೂ ಇದೆ. ಹೀಗಾಗಿ ಅನಾಹುತವಾಗುವ ಮುನ್ನ ಸಂಚಾರಿ ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.

ಈ ಹಿಂದೆ ಅಮೀರ್ ಅಹಮದ್ ವೃತ್ತದಿಂದ ಜ್ವರಾರಿ ಮೆಡಿಕಲ್ ಸ್ಟೋರ್‌ನವರೆಗೆ ಪಾರ್ಕಿಂಗ್ ಮಾಡುವಂತಿಲ್ಲ ಎಂಬ ಪೊಲೀಸ್ ಇಲಾಖೆ ಆದೇಶ ಮೂಲೆಗೆ ಸೇರಿದೆ. ನೆಹರು ರಸ್ತೆಯಲ್ಲಿ ಸುಗಮ ಸಂಚಾರ ಕಷ್ಟವಾಗಿದೆ. ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಏಕಮುಖ ವಾಹನ ಸಂಚಾರ ಎಂದು ಆದೇಶವಿದ್ದರೂ ಅಲ್ಲಿ ಬಹುತೇಕ ಸಂದರ್ಭದಲ್ಲಿ ದ್ವಿಮುಖವಾಗಿ ವಾಹನಗಳು ಸಂಚರಿಸುತ್ತವೆ. ಸಂಚಾರಿ ಪೊಲೀಸರು ಇದೆಲ್ಲವನ್ನೂ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಮಲೆನಾಡು ಕೇಸರಿ ಪಡೆ ಪ್ರಮುಖರಾದ ಕೋಟೆ ರಾಜು, ವಿಜಯಕುಮಾರ್, ಜನಾರ್ದನ, ಅಂಕುಶ್, ಚೇತನ್, ಉತ್ತಮ್, ಗುರು ವಿ.ಶೇಟ್ ಇತರರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net