ಮುಖ್ಯಮಂತ್ರಿಗೆ ಮನವಿ

Appeal to the Chief Minister
Published on

ಕುಶಾಲನಗರ:

೨ನೇ ಬಾರಿಗೆ ಮುಖ್ಯಮಂತ್ರಿ ಆದ ನಂತರ ಕೊಡಗಿಗೆ ಮೊದಲ ಸಲ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಶಾಲನಗರ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಶಾಸಕ ಡಾ. ಮಂತರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ಮೂಲಕ ವಕೀಲರ ಸಂಘದಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ. ಮಾಜಿ ಸಿಎಂ ಗುಂಡೂರಾವ್ ಆಶಯದಂತೆ ಕುಶಾಲನಗರ ತಾಲೂಕಿನ ಹೆಸರನ್ನು ಕಾವೇರಿ ತಾಲೂಕು ಎಂದು ಮರು ನಾಮಕಾರಣ ಮಾಡಬೇಕು.

ಕುಶಾಲನಗರಕ್ಕೆ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಬೇಕು. ಹಾಲಿ ಇರುವ ಆಸ್ಪತ್ರೆಯನ್ನು ೧೦೦ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆ ಏರಿಸಬೇಕು. ನೆನೆಗುದಿಗೆ ಬಿದ್ದಿರುವ ಪೊಲೀಸ್ ತರಬೇತಿ ಶಾಲೆಗೆ ಮಂಜೂರಾತಿ ಕೊಡಬೇಕು. ಕೂಡಿಗೆಯಲ್ಲಿ ಪಶುಸಂಗೋಪನೆ ಅಭಿವೃದ್ಧಿ ಪಡಿಸಬೇಕು. ಕೂಡಿಗೆಯಲ್ಲಿ ಕೃಷಿ ಕಾಲೇಜು ಪ್ರಾರಂಭ ಮಾಡಬೇಕು. ಬಹುಕಾಲದ ಬೇಡಿಕೆಯಾದ ಮುತ್ತಿನ ಮುಳುಸೋಗೆ - ಕುಶಾಲನಗರ ಸೇತುವೆ ನಿರ್ಮಾಣ ಆಗಬೇಕು. ಕೂಡಿಗೆ ಕೈಗಾರಿಕಾ ಪ್ರದೇಶಕ್ಕೆ ಗುಂಡೂರಾವ್ ಹೆಸರು ನಾಮಕರಣ ಮಾಡಬೇಕು. ಕೊಪ್ಪಗೇಟ್ ಪ್ರವೇಶ ದ್ವಾರದ ಬಳಿ ನೆನೆಗುದಿಗೆ ಬಿದ್ದಿರುವ ಗೇಟ್ ವೇ ಆಫ್ ಕೊಡಗು ಪ್ರವಾಸೋದ್ಯಮ ಯೋಜನೆ ಪ್ರಾರಂಭಿಸಬೇಕು. ನಾಲ್ಕು ದಶಕಗಳ ಬೇಡಿಕೆಯಾದ ರೈಲ್ವೇ ಮುತ್ತಿನ ಮುಳ್ಳುಸೋಗೆ ವರೆಗೂ ಬರಬೇಕು. ಅಜ ಕ್ಷೀರ ಸಂಗೋಪನೆ ಮತ್ತು ಅಭಿವೃದ್ಧಿ ಕೇಂದ್ರ ಆರಂಭಿಸಬೇಕು. ಕುಶಾಲನಗರಕ್ಕೆ ಒಂದು ಸುಸಜ್ಜಿತವಾದ ಸ್ಟೇಡಿಯಂ ಬೇಕು.

ಕುಶಾಲನಗರಕ್ಕೆ ಮಿನಿ ಏರ್ ಪೋರ್ಟ್ ಬೇಕು. ಹಾಲಿ ಇರುವ ಪಾಲೀಟೆಕ್ನಿಕ್‌ನಲ್ಲಿ ಕಂಪ್ಯೂಟರ್ ಸೈನ್ಸ್, ಐ.ಟಿ.ಐ. ವಿಭಾಗ, ಜಾಬ್ ಓರಿಯೆಂಟಡ್ ಕೋರ್ಸ್ ಇತ್ಯಾದಿಗಳನ್ನು ತೆರೆಯಬೇಕು. ಕೂಡಿಗೆಯ ಕ್ರೀಡಾ ಶಾಲೆಯಲ್ಲಿ ಮುಚ್ಚಿ ಹೋದ ವಿಭಾಗಗಳನ್ನು ಮತ್ತೆ ತೆರೆಯಬೇಕು. ಕುಶಾಲನಗರಕ್ಕೆ ಬಯಲು ರಂಗಭೂಮಿ ಬೇಕು ಎನ್ನುವ ಮನವಿ ಗುರುವಾರ ಸಲ್ಲಿಸಲಾಗುತ್ತಿದೆ ಎಂದು ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net