

ಶಿವಮೊಗ್ಗ: ನಗರದ ವಾರ್ಡ್ ನಂ.1ರಲ್ಲಿ ಮೂಲ ಸೌಕರ್ಯ ಹಾಗೂ ನೈರ್ಮಲ್ಯ ಕೊರತೆಯಿದ್ದು ಕೂಡಲೇ ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ವಾರ್ಡ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಮಂಗಳವಾರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು.
ನೈರ್ಮಲ್ಯ ಸಮಸ್ಯೆ ಬಗ್ಗೆ ದೂರು ನೀಡಿದರೆ ಪಾಲಿಕೆ ಸಿಬ್ಬಂದಿ ಪೌರ ಕಾರ್ಮಿಕರ ಕೊರತೆಯಿದೆ ಎಂಬ ಉತ್ತರ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದ್ದು, ಜನರು ಕಾಯಿಲೆಯಿಂದ ಬಳಲುವಂತಾಗಿದೆ. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಸೊಳ್ಳೆ ನಿಯಂತ್ರಕ ಸಿಂಪರಣೆ ಮಾಡಬೇಕು. ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಬೇಕೆಂದು ಆಗ್ರಹಿಸಿದರು.
ವಾರ್ಡ್‌ನ ಪ್ರಮುಖರಾದ ಎಸ್.ಚಿನ್ನಪ್ಪ, ಎಸ್.ತಂಗರಾಜ್, ಕೆ.ಈಶ್ವರ್, ಆರ್.ಆರ್.ಮಂಜುನಾಥ್, ಬಸವರಾಜ್, ಮೋಹನ್, ಶೋಬಾ, ವೇದಮೂರ್ತಿ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.