ಎಪಿಎಂಸಿಗೆ ಜಾಗ ಗುರುತಿಸಲು ಒತ್ತಾಯ

klr raitha
ಕೋಲಾರದ ಬಸ್​ ನಿಲ್ದಾಣದ ವೃತ್ತದಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
Published on

ಕೋಲಾರ: ಎಪಿಎಂಸಿ ಮಾರುಕಟ್ಟೆಯ ಜಾಗ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ತ್ವರಿತವಾಗಿ ಜಾಗ ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ಸಂದ ಕಾರ್ಯಕರ್ತರು, ಟೊಮ್ಯಾಟೊ ಇತರೆ ತರಕಾರಿಯನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿ, ದಶಕ ಕಳೆದರೂ ಜಾಗ ಗುರುತಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಮಾರುಕಟ್ಟೆಯ ಜಾಗ ಸಮಸ್ಯೆಯು ಇಂದು ನೆನ್ನೆಯದಲ್ಲ, ಹಲವು ವರ್ಷಗಳಿಂದಲೂ ಜೀವಂತ ಇದೆ. ಕಾಲಕ್ಕೆ ತಕ್ಕಂತೆ ಜಾಗ ಕಲ್ಪಿಸಬೇಕು ಎಂದು ಒತ್ತಾಯ ಮಾಡಿಕೊಂಡು ಬರುತ್ತಿದ್ದರೂ ಅಧಿಕಾರಿಗಳು ಉದಾಸೀನ ತೋರುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೊಮ್ಯಾಟೊ ಸುಗ್ಗಿ ಕಾಲ ಬಂತು ಎಂದರೆ ಜಾಗ ಸಮಸ್ಯೆಯಾಗುತ್ತದೆ. ಕಿರಿದಾದ ಜಾಗದಲ್ಲಿ ವಹಿವಾಟು ನಡೆಯುತ್ತಿರುವುದರಿಂದ ಖರೀದಿಗಾಗಿ ವ್ಯಾಪಾರಸ್ಥರು ಆಗಮಿಸುತ್ತಿಲ್ಲ. ಇದರಿಂದಾಗಿ ಸ್ಥಳಿಯ ಟೊಮ್ಯಾಟೊಗೆ ಬೇಡಿಕೆ ಕುಸಿದು ದರ ಕಡಿಮೆಯಾಗುತ್ತಿದೆ. ಇದಕ್ಕೆಲ್ಲ ಅಧಿಕಾರಿಗಳೇ ನೇರ ಹೊಣೆ ಎಂದು ಕಿಡಿಕಾರಿದರು.

ಒಂದು ಎಕರೆ ಟೊಮ್ಯಾಟೊ ಬೆಳೆಯಬೇಕಾದರೆ ಲಾಂತರ ರೂ. ವೆಚ್ಚ ತಗಲುತ್ತದೆ. ಬೆಲೆ ಕುಸಿತದಿಂದ ಮಾಲೀಕನಿಗೆ ಕೂಲಿ ಕಾರ್ಮಿಕರಿಗೆ ಕೂಲಿ ನೀಡದ ಮಟ್ಟಕ್ಕೆ ತಲುಪುತ್ತದೆ. ಇರುವ ಫಸಲನ್ನು ತೋಟದಲ್ಲೂ ಬಿಡದೆ

ಮಾರುಕಟ್ಟೆಗೆ ತರಲಾಗದ ಅತಂತ್ರ ಪರಿಸ್ಥಿತಿಯಲ್ಲಿರುವ ಬೆಳೆಗಾರರು ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂದ ಮುಖಂಡ ಮರಗಲ್​ ಶ್ರೀನಿವಾಸ್​ ಮಾತನಾಡಿ, ಏಷ್ಯಾದಲ್ಲಿಯೇ ಅತಿದೊಡ್ಡ 2ನೇ ಮಾರುಕಟ್ಟೆ ಕೋಲಾರ ಎಪಿಎಂಸಿ. ಅವಶ್ಯಕತೆಯಿರುವ 100 ಎಕರೆ ಜಮೀನನ್ನು ಹುಡುಕಿ ಮಂಜೂರು ಮಾಡುವಲ್ಲಿ ಕಂದಾಯ, ಸರ್ವೇ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಹೋರಾಟಗಾರರು ಹುಡುಕಿಕೊಟ್ಟಿರುವ ಸರ್ಕಾರಿ ಜಮೀನನ್ನು ಭೂಗಳ್ಳರಿಂದ ತೆರವುಗೊಳಿಸಿ ಮಾರುಕಟ್ಟೆಗೆ ಮಂಜೂರು ಮಾಡಬೇಕಾದ ಅಧಿಕಾರಿಗಳೇ ಭೂಗಳ್ಳರಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಹೈಕೋರ್ಟ್​ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಕುತಂತ್ರ ಮಾಡುವ ಅಧಿಕಾರಿಗಳ ವಿರುದ್ಧ ಏಕೆ ಕ್ರಮವಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಂದ ಮಹಿಳಾ ಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಹಳ್ಳಿ ಮಂಜುನಾಥ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತೆರ್ನಹಳ್ಳಿ ಆಂಜಿನಪ್ಪ, ಅಪ್ಪೋಜಿರಾವ್​, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನರಸಿಂಹಪ್ಪ, ಸುಪ್ರಿಂ ಚಲ, ಚಂದ್ರಪ್ಪ, ಪುತ್ತೇರಿ ರಾಜು, ಗಿರೀಶ್​, ವೆಂಕಟಮ್ಮ, ಮುನಿರತ್ನಮ್ಮ, ಶಾರದಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net