ಬ್ಯೂಟಿ ಮಾತ್ರವಲ್ಲ ಗಗನಸಖಿಯರು ಹೈ ಹೀಲ್ಸ್ ಧರಿಸುವುದರ ಹಿಂದಿರುವ ಮತ್ತೊಂದು ರಹಸ್ಯ ಹೀಗಿದೆ… Air hostesses

Air hostesses
Published on

Air hostesses : ವಿಮಾನ ಪ್ರಯಾಣದ ವೇಳೆ ಗಗನಸಖಿಯರು ತಮ್ಮ ನಡವಳಿಕೆ ಮತ್ತು ಡ್ರೆಸ್ ಕೋಡ್​ನಿಂದಲೇ ವಿಶೇಷ ಗಮನ ಸೆಳೆಯುತ್ತಾರೆ. ಅನೇಕ ವಿಮಾನಯಾನ ಸಂಸ್ಥೆಗಳಲ್ಲಿ ಗಗನಸಖಿಯರ ಸಮವಸ್ತ್ರಗಳು ವಿಭಿನ್ನವಾಗಿದ್ದರೂ, ಅವರೆಲ್ಲರಿಗೂ ಒಂದು ಸಾಮಾನ್ಯ ಅಂಶವಿದೆ. ಅದೇನೆಂದರೆ ಹೆಚ್ಚಿನ ಗಗನಸಖಿಯರು ಹೈ ಹೀಲ್ಸ್ ಧರಿಸುತ್ತಾರೆ. ಇದರ ಹಿಂದಿರುವ ಕಾರಣ ಏನೆಂಬುದನ್ನು ನಾವೀಗ ತಿಳಿಯೋಣ.

ಕೆಲವರು ಈ ಅನುಮಾನವನ್ನು ಸಾಮಾಜಿಕ ಮಾಧ್ಯಮ ವೇದಿಕೆ Quora ನಲ್ಲಿ ಕೇಳಿದ್ದಾರೆ. ಈ ಪ್ರಶ್ನೆಗೆ ವಿಲಿಯಂ ವುಡ್ ಎಂಬ ವ್ಯಕ್ತಿ ನೀಡಿದ ಉತ್ತರ ಇದೀಗ ವೈರಲ್ ಆಗುತ್ತಿದೆ. 1966 ರಿಂದ 1976 ರವರೆಗೆ, ಪೆಸಿಫಿಕ್ ಸೌತ್‌ವೆಸ್ಟ್ ಏರ್‌ಲೈನ್ಸ್‌ನ ಗಗನಸಖಿಯರು ಮಿನಿ ಸ್ಕರ್ಟ್‌ಗಳ ಜತೆಗೆ ಹೈ ಹೀಲ್ಸ್ ಧರಿಸುತ್ತಿದ್ದರು. ಇದು ವಿಮಾನದಲ್ಲಿ ಪ್ರಯಾಣಿಸಲು ಬಂದ ಪುರುಷರನ್ನು ಆಕರ್ಷಿಸಿತು. ಈ ಮೂಲಕ ಹೆಚ್ಚಿನ ಪುರುಷರು ಪ್ರಯಾಣಿಸಲು ಬರುತ್ತಾರೆ ಎಂದು ಭಾವಿಸಿ ವಿಮಾನಯಾನವು ಗಗನಸಖಿಯರಿಗೆ ಹೈ ಹೀಲ್ಸ್ ಧರಿಸುವಂತೆ ಹೇಳಿದೆ ಎಂದು ವಿಲಿಯಂ ವುಡ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಇದೇ ಸಂದರ್ಭದಲ್ಲಿ ಸ್ಕೈಲಾರ್ಕ್ ಇನ್ಸ್ಟಿಟ್ಯೂಟ್ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಗಗನಸಖಿಯರು ಹೈ ಹೀಲ್ಸ್ ಏಕೆ ಧರಿಸುತ್ತಾರೆ ಎಂಬುದನ್ನು ತಿಳಿಸಿದೆ. ಆಯಾ ವಿಮಾನಯಾನ ಸಂಸ್ಥೆಗಳು ನಿಗದಿಪಡಿಸಿದ ಷರತ್ತುಗಳಿಗೆ ಅನುಗುಣವಾಗಿ ಗಗನಸಖಿಯರು ತಮ್ಮ ಉಡುಗೆಯನ್ನು ಬದಲಾಯಿಸುತ್ತಾರೆ. ಅನಾದಿ ಕಾಲದಿಂದಲೂ ಮಹಿಳೆಯರು ಹೈ ಹೀಲ್ಸ್ ಧರಿಸುತ್ತಿದ್ದಾರೆ. ಹೈ ಹೀಲ್ಸ್ ಔಪಚಾರಿಕ ಉಡುಗೆಗೆ ಬಹಳ ಸೂಕ್ತವಾಗಿದೆ. ಇದು ಅವರನ್ನು ಹೆಚ್ಚು ಸುಂದರಗೊಳಿಸುತ್ತದೆ. ಇದು ಇತರರಿಗಿಂತ ಭಿನ್ನವಾಗಿರಲು ಸಹ ಸಹಾಯ ಮಾಡುತ್ತದೆ. ಆದರೆ ಹೈ ಹೀಲ್ಸ್ ಧರಿಸುವುದು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿದಾಗ, ಅನೇಕ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸಿದವು ಎಂದು ಸ್ಕೈಲಾರ್ಕ್ ಹೇಳಿದೆ.

ಇನ್ನೂ ಚೀನಾದ ಏರ್‌ಲೈನ್​ ಆಗಿರುವ ಏರ್ ಟ್ರಾವೆಲ್, ಗಗನಸಖಿಯರು ಹೈ ಹೀಲ್ಸ್ ಅನ್ನು ಕಟ್ಟುನಿಟ್ಟಾಗಿ ಧರಿಸಬೇಕೆಂಬ ನಿಯಮವನ್ನು ಮುಂದಿಟ್ಟಿಲ್ಲ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net