ಮತದಾರನಿಗೆ ಹತ್ತಿರವಾಗಲು 'ಚಾಯ್' ಮಾರಿದ ಸಚಿವ..!

minister ambati
Published on

ಪಲ್ನಾಡು(ಆಂಧ್ರಪ್ರದೇಶ): ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ತಮ್ಮಲ್ಲಿರುವ ನಟ ಸಾರ್ವಭೌಮರನ್ನು ಬಡಿದೆಬ್ಬಿಸುತ್ತಿದ್ದಾರೆ. ವಿಶೇಷವಾಗಿ ವೈಎಸ್​ಆರ್​ಸಿಪಿ ನಾಯಕರು ಜನರ ಬಳಿಗೆ ಹೋಗಿ ವಿಚಿತ್ರವಾದ ಕೆಲಸಗಳನ್ನು ಮಾಡುತ್ತಾರೆ. ಇತ್ತೀಚೆಗೆ ಸಚಿವ ಅಂಬಟಿ ರಾಂಬಾಬು ಟೀ ಮಾಸ್ಟರ್ ಆಗಿ ಕಾಣಿಸಿಕೊಂಡಿದ್ದರು.

ಆಂದ್ರಪ್ರದೇಶದಲ್ಲಿ ಸಾರ್ವಾತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದು, ಕಳೆದೆರಡು ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿರುವ ಸಚಿವ ಅಂಬಟಿ ರಾಂಬಾಬು ಬುಧವಾರ ತನ್ನ ಕ್ಷೇತ್ರದ ವ್ಯಾಪ್ತಿಯ ಸತ್ತೇನಪಲ್ಲಿಯಲ್ಲಿ ಟೀ ಅಂಗಡಿಯನ್ನು ನೋಡಿದ ನಂತರ ಅಲ್ಲಿಗೆ ತೆರಳಿದರು. ಅಂಗಡಿ ಮಾಲಿಕನನ್ನು ಪಕ್ಕಕ್ಕೆ ಸರಿಸಿ ಟೀ ತಹಾರಿಸಿ ಕುಡಿದು.. ತನ್ನ ಹಿಂಬಾಲಕರಿಗೂ ಕೊಟ್ಟು, ಜನರ ಜತೆ ಮಾತನಾಡಿದ್ದಾನೆ. ಇದನ್ನು ನೋಡಿದ ಜನ ಹೀಗೂ ಉಂಟೇ ಎಂದು ಮಾತನಾಡಿಕೊಂಡಿದ್ದಾರೆ. ಕೆಲವರು ಮೊಬೈಲ್​ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಬಳಿಕ ಟೀ ಸ್ಟಾಲ್ ಗೆ ಬಂದವರನ್ನು ಮಾತನಾಡಿಸಿ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಆದರೆ, ಸಚಿವ ಅಂಬಟಿ ರಾಂಬಾಬು ಅವರು ಸ್ಥಳೀಯರೊಂದಿಗೆ ಬೆರೆಯುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಮತಕ್ಕಾಗಿ ಮಂತ್ರಿಯ ಕಸರತ್ತು ನೋಡಿ ಜನ ನಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net