

ಅರಕಲಗೂಡು: ಮಕ್ಕಳು ಕಲಿಕಾ ಸಾಮರ್ಥ್ಯ, ಜ್ಞಾನ ವೃದ್ಧಿಸಿಕೊಳ್ಳಲು ಉತ್ತಮ ನಡವಳಿಕೆ, ಶ್ರದ್ಧೆ ಮೈಗೂಡಿಸಿಕೊಂಡು ಅಭ್ಯಾಸ ಮಾಡಬೇಕು ಎಂದು ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದರು.
ತಾಲೂಕಿನ ಕೆಸವತ್ತೂರು ಶ್ರೀ ಸಿದ್ಧಲಿಂಗೇಶ್ವರ ವಿರಕ್ತ ಮಠದಲ್ಲಿ ಆಯೋಜಿಸಿದ್ದ ಕಲಿಕಾ ಬಲವರ್ದನ ಕಾರ್ಯಗಾರದಲ್ಲಿ ಮಾತನಾಡಿದ ಶ್ರೀಗಳು, ಕಲಿಕಾ ಬಲವರ್ಧನೆ ಹೆಚ್ಚಿಸಿಕೊಳ್ಳುವ ಕಾಯಕವು ತಪ್ಪಸ್ಸಿದ್ದಂತೆ. ಸಾಹಿತ್ಯ, ವಿದ್ಯೆ, ಕ್ರೀಡಾ ಚಟುವಟಿಕೆಯಲ್ಲಿ ಸಾಧನೆ ಮಾಡಬೇಕಾದರೆ ಏಕಾಗ್ರತೆ ಮತ್ತು ಗುರಿ ಇರಬೇಕು. ನಿಶ್ಚಿತ ಧ್ಯೇಯ, ಮನಸ್ಸು ಕೇಂದ್ರೀಕೃತವಾಗಿರಬೇಕು, ಆಗ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಮಾರಸ್ವಾಮಿ ವಚನ ಕಂಠಪಾಠ ಮಾಡಿದ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ವಚನ ಪುಸ್ತಕಗಳನ್ನು ನೀಡಿದರು.