ಅರೆಬರೆ ಡ್ರೆಸ್​ ಬಗ್ಗೆ ವ್ಯಕ್ತಿಯೊಬ್ಬ ಆಡಿದ ಮಾತು ಕೇಳಿ ಕೆರಳಿದ ಉರ್ಫಿ: ಮುಂಬೈ ಏರ್ಪೋರ್ಟ್​ನಲ್ಲಿ ಹೈಡ್ರಾಮ!

Urfi Javed
Published on

ಮುಂಬೈ: ಉರ್ಫಿ ಜಾವೇದ್​ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ತುಂಬಾ ಗೊತ್ತಿರುವವರಿಗೆ ಆಕೆಯ ಅರೆಬರೆ ಮೈಮಾಟ ಪ್ರದರ್ಶನವೇ ಕಣ್ಮುಂದೆ ಬರುತ್ತದೆ. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುವ ಈ ಬಾಲಿವುಡ್​ ನಟಿ, ಜಾಲತಾಣದಲ್ಲಿ ತಮ್ಮ ಅರೆಬರೆ ಬಟ್ಟೆಯಿಂದಲೇ ಫೇಮಸ್​ ಆಗಿದ್ದಾಳೆ.

ಅರೆಬರೆ ದೇಹ ಕಾಣುವಂತೆ ಪ್ರತಿನಿತ್ಯ ವಿಭಿನ್ನ ಉಡುಗೆ ತೊಟ್ಟು ಮುಂಬೈ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ಇನ್​ಸ್ಟಾಗ್ರಾಂ ಇಣುಕಿ ನೋಡಿದರೆ ಅಲ್ಲಿ ಅರೆಬೆತ್ತಲೆ ಫೋಟೋಗಳ ರಾಶಿಯೇ ಇದೆ. ಇದೇ ಕಾರಣಕ್ಕೆ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಅಲ್ಲದೆ, ವಿವಾದಗಳಿಂದಲೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಇನ್ನೊಂದು ಕಾರಣಕ್ಕೆ ಉರ್ಫಿ ಸುದ್ದಿಯಾಗಿದ್ದಾರೆ. ಆ ಕಾರಣ ಏನಪ್ಪಾ ಅಂದ್ರೆ ಹಿರಿಯ ವ್ಯಕ್ತಿಯ ಜತೆ ವಿಮಾನ ನಿಲ್ದಾಣದಲ್ಲೇ ಉರ್ಫಿ ಜಗಳ ಆಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಭಾರತದ ಗೌರವಕ್ಕೆ ಧಕ್ಕೆ 

ಉರ್ಫಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಹಸಿರು ಬಣ್ಣದ ಬ್ಯಾಕ್​ಲೆಸ್​ ಉಡುಗೆಯಲ್ಲಿ ನೋಡಿದ ಹಿರಿಯ ವ್ಯಕ್ತಿಯೊಬ್ಬರು ಎಂಥಾ ಕಳಪೆ ನಟಿ ಈಕೆ ಎಂದು ಗೊಣಗಿಕೊಳ್ಳುತ್ತಾರೆ. ಅಲ್ಲದೆ, ಈಕೆ ಭಾರತದ ಗೌರವಕ್ಕೆ ಧಕ್ಕೆ ತರುತ್ತಿದ್ದಾಳೆ ಮತ್ತು ಭಾರತವನ್ನು ನಾಚಿಕೆಪಡುವಂತೆ ಮಾಡುತ್ತಿದ್ದಾಳೆ ಹಾಗೂ ದೇಶ ಆಚರಿಸುವ ಸಂಸ್ಕೃತಿಯನ್ನುಈಕೆ ಪಾಲಿಸುತ್ತಿಲ್ಲ ಎಂದು ಟೀಕಿಸಿದರು.

ತೊಂದರೆ ಇದೆಯೇ ಸರ್? 

ಇದನ್ನು ಕೇಳಿಸಿಕೊಂಡ ಉರ್ಫಿ ಆ ವ್ಯಕ್ತಿಯನ್ನು ಅಲ್ಲಿಯೇ ತರಾಟೆಗೆ ತೆಗೆದುಕೊಂಡರು. ನನ್ನ ಡ್ರೆಸ್ಸಿಂಗ್​ನಿಂದ ನಿಮ್ಮ ತಂದೆ ಅಥವಾ ನಿಮಗೆ ಏನಾದರೂ ತೊಂದರೆ ಇದೆಯೇ ಸರ್? ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಉರ್ಫಿಯ ಫ್ರೆಂಡ್ಸ್​ ಒಬ್ಬರು ಮುಂದೆ ಬಂದು ಜಗಳವನ್ನು ಬಿಡಿಸಲು ಪ್ರಯತ್ನಿಸಿದರು ಮತ್ತು ಘಟನೆಯನ್ನು ಸೆರೆಹಿಡಿಯದಂತೆ ಮಾಧ್ಯಮಗಳನ್ನು ಕೇಳಿಕೊಂಡರು. ಆದರೆ, ಉರ್ಫಿ ಮತ್ತು ಆ ವ್ಯಕ್ತಿಯ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಎಲ್ಲವೂ ತಣ್ಣಗಾದ ಬಳಿಕ ಉರ್ಫಿ ಅಲ್ಲಿಂದ ಹೊರಟರು.

ಪರ-ವಿರೋಧ ಚರ್ಚೆ

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಉಡುಗೆ ಅವರ ಇಷ್ಟ ಎಂದು ಕೆಲವರು ಉರ್ಫಿಯನ್ನು ಬೆಂಬಲಿಸಿದರೆ ಇನ್ನು ಕೆಲವರು ಭಾರತದ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಹಿರಿಯ ವ್ಯಕ್ತಿಗೆ ಬೆಂಬಲ ನೀಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net