

ಮೂಗೂರು: ಮೂಗೂರು ಗ್ರಾಮ ಪಂಚಾಯಿತಿಗೆ ಕಂಪ್ಯೂಟರ್ ರಿಪೇರಿ ಮಾಡಲು ತಿ.ನರಸೀಪುರದಿಂದ ಬಂದಿದ್ದ ವ್ಯಕ್ತಿಗೆ ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿರುವುದರಿಂದ ಗ್ರಾಪಂ ಸಿಬ್ಬಂದಿ ಆತಂಕಕ್ಕೆ ಈಡಾಗಿದ್ದಾರೆ.
ಬುಧವಾರ ಗ್ರಾಪಂ ಕಚೇರಿಯಲ್ಲಿ ಔಷಧ ಸಿಂಪಡಣೆ ಮಾಡಲಾಯಿತು. ಸೋಂಕು ಹೆಚ್ಚುತ್ತಿರುವುದರಿಂದ ಲಾಕ್‌ಡೌನ್ ಮಾಡಬೇಕೆಂದು ಮಾಜಿ ಗ್ರಾಂ.ಪಂ. ಸದಸ್ಯ ಕೆ.ಶೇಷಣ್ಣ ಆಗ್ರಹಿಸಿದ್ದಾರೆ.
ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ರೋಗಾಣುಗಳು 24 ಗಂಟೆಗಳಲ್ಲಿ ಸಾಯುತ್ತವೆ. ನಂತರ ಕಚೇರಿ ತೆರೆಯಲಾಗುವುದು ಎಂದು ತಾಪಂ ಇಒ ಜೆರಾಲ್ಡ್ ರಾಜೇಶ್ ತಿಳಿಸಿದರು.